ದೊಡ್ಡಬಳ್ಳಾಪುರ: ಸೂರ್ಯ ಗ್ರಹಣದ ಹಿನ್ನೆಲೆಯಲ್ಲಿ ತಾಲ್ಲೂಕಿನದ್ಯಾಂತ ಎಲ್ಲಾ ದೇವಾಲಯಗಳ ಬಾಗಿಲು ಬಂದ್ ಮಾಡಲಾಗಿತ್ತು.
ಸೂರ್ಯಗ್ರಹಣ ಮುಕ್ತಾಯವಾದ ನಂತರ ಕನಸವಾಡಿಯಲ್ಲಿನ ಶನಿಮಹಾತ್ಮ ದೇವಾಲಯ, ಘಾಟಿ ಕ್ಷೇತ್ರದಲ್ಲಿನ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಬಾಗಿಲು ತೆರೆದು ಇಡೀ ದೇವಾಲಯವನ್ನು ನೀರಿನಿಂದ ಶುದ್ದೀಕರಣ ಮಾಡಲಾಯಿತು.
ಧರ್ನುಮಾಸದ ಪೂಜೆಗಳನ್ನು ಮಾತ್ರ ಮಾಡುವ ಮೂಲಕ ಬೆಳಿಗ್ಗೆ 5.30ಕ್ಕೆ ದೇವಾಲಯಗಳ ಬಾಗಿಲುಗಳನ್ನು ಬಂದ್ ಮಾಡಲಾಗಿತ್ತು. ಈಗಷ್ಟೇ ದೇವಾಲಯದಲ್ಲಿ ಅಭಿಷೇಕ, ಅಲಂಕಾರ ಪ್ರಾರಂಭವಾಗಿದ್ದು ದೇವರ ದರ್ಶನಕ್ಕಾಗಿ ಭಕ್ತಾದಿಗಳು ದೇವಾಲಯದ ಕಡೆಗೆ ಬರಲು ಆರಂಭಿಸಿದ್ದು 2 ಗಂಟೆಯ ನಂತರ ಮಹಾಮಂಗಳರಾತಿ ನಡೆಯಲಿದೆ ಎಂದು ಶನಿಮಹಾತ್ಮ ದೇವಾಲಯದ ಅರ್ಚಕ ಕೆ.ಎಸ್.ಗಿರೀಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.