ADVERTISEMENT

​ಗೀತಂ ವಿವಿ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2018, 13:01 IST
Last Updated 14 ಸೆಪ್ಟೆಂಬರ್ 2018, 13:01 IST
ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು  ಶಾಸಕ ಟಿ.ವೆಂಕಟರಮಣಯ್ಯ ಅನಾವರಣಗೊಳಿಸಿದರು
ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು  ಶಾಸಕ ಟಿ.ವೆಂಕಟರಮಣಯ್ಯ ಅನಾವರಣಗೊಳಿಸಿದರು   

ನಾಗದೇನಹಳ್ಳಿ(ದೊಡ್ಡಬಳ್ಳಾಪುರ): ತಾಲ್ಲೂಕಿನ ನಾಗದೇನಹಳ್ಳಿ ಗೀತಂ ವಿಶ್ವವಿದ್ಯಾಲಯದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಶಾಸಕ ಟಿ.ವೆಂಕಟರಮಣಯ್ಯ ಅನಾವರಣ ಮಾಡಿದರು.

ಅವರು ಮಾತನಾಡಿ, ಬೆಂಗಳೂರನ್ನು ನಿರ್ಮಿಸಿದ ನಾಡಪ್ರಭು ಕೆಂಪೇಗೌಡರ ಆಡಳಿತ, ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಬೆಂಗಳೂರು ಎಂಬ ಹೆಸರಿನ ನಗರ ಇಂದು ಜಗತ್ಪ್ರಸಿದ್ಧ ನಗರವಾಗಿ ಬೆಳೆಯಲು ಕಾರಣಕರ್ತರು ಕೆಂಪೇಗೌಡ. ಜಾಗತಿಕ ಐಟಿ ಕ್ಷೇತ್ರದಲ್ಲಿ ಬ್ರಾಂಡ್ ಬೆಂಗಳೂರು ಎಂಬ ಮಹಾಛಾಪು ಮೂಡಿಸಿದೆ ಎಂದು ತಿಳಿಸಿದರು.

ಉದ್ಯೋಗ ಅರಸಿ ಬರುವವರಿಗೆ ತನ್ನೊಡಲಲ್ಲಿ ಜಾಗ ನೀಡಿ ಅವರ ಜೀವನಕ್ಕೆ ದಾರಿ ತೋರುತ್ತಿರುವ, ರಾಜ್ಯದ ವಿವಿಧ ಜಿಲ್ಲೆಯ ಯುವ ಪೀಳಿಗೆ ಆಶಾಕಿರಣವಾಗಿರುವ ಕೆಂಪೇಗೌಡರಿಗೆ ಎಲ್ಲರೂ ಚಿರಋಣಿಗಳಾಗಿರಬೇಕು. ಅವರ ದಿಟ್ಟತನ, ಆದರ್ಶ ಜೀವನ ಇಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದರು.

ADVERTISEMENT

ಗೀತಂ ಕ್ಯಾಂಪಸ್‍ನ ಸಹಾಯಕ ಕುಲಪತಿ ಪ್ರೊ.ಪಿ.ವಿ.ಸಿವಪುಲ್ಲಯ್ಯ, ಗೀತಂ ಸ್ಕೂಲ್ ಆಫ್ ಟೆಕ್ನಾಲಜಿ ನಿರ್ದೇಶಕ ಪ್ರೊ.ಕೆ.ವಿಜಯಭಾಸ್ಕರ ರಾಜು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಎಂ.ದ್ಯಾಮಪ್ಪ, ಗೀತಂ ವಿವಿ ಆಡಳಿತ ಮತ್ತು ದಾಖಲಾತಿ ನಿರ್ದೇಶಕ ಡಿ.ವಂಶಿ, ಬಿಸಿನೆಸ್ ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್ ಸ್ಟಡಿಸ್‍ನ ನಿರ್ದೇಶಕ ಪ್ರೊ.ಎಂ.ವಿ.ರಾಮಪ್ರಸಾದ್ ಭಾಗವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಅರುಣಾ ಆನಂದ್, ತಾಲ್ಲೂಕು ಪಂಚಾಯಿತಿ ಸದಸ್ಯ ಚಿಕ್ಕ ಆಂಜಿನಪ್ಪ, ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾರಾಯಣಮ್ಮಗುಂಡಪ್ಪ, ಸಹಕಾರಿ ಯೂನಿಯನ್ ನಿರ್ದೇಶಕ ಬಿ.ಸಿ.ಆನಂದ್, ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂಗರಾಜು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.