ಆನೇಕಲ್ : ಕರ್ನಾಟಕ ತಮಿಳುನಾಡು ಗಡಿಯ ತಾಲ್ಲೂಕಿನ ಬಳ್ಳೂರು ಸಮೀಪದಲ್ಲಿ ತಮಿಳುನಾಡಿನ ರೌಡಿಶೀಟರ್ವೊಬ್ಬನನ್ನು ಹತ್ಯೆ ಮಾಡಲಾಗಿದೆ.
ತಮಿಳುನಾಡಿನ ಮಧುರೈ ಮೂಲದ ಅಳಗರಾಜ್(31) ಕೊಲೆಯಾದವರು.
ಅಳಗರಾಜ್ ರೌಡಿಸಂ ಬಿಟ್ಟು ತುಪ್ಪದ ವ್ಯಾಪಾರ ಮಾಡುತ್ತಿದ್ದರು ಎನ್ನಲಾಗಿದೆ. ಬುಧವಾರ ರಾತ್ರಿ ಕೆಲಸ ಮುಗಿಸಿ ಬಳ್ಳೂರು ಸಮೀಪದ ಬಾರ್ವೊಂದರಲ್ಲಿ ಮದ್ಯ ಖರೀದಿಸಲು ಬಂದಿದ್ದಾಗ ಹಂತಕರು ಹತ್ಯೆ ಮಾಡಿದ್ದಾರೆ. ಅಳಗರಾಜ್ ವಿರುದ್ಧ ತಮಿಳುನಾಡಿನ ತಿರುಪಾಚಿ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳಿವೆ ಎನ್ನಲಾಗಿದೆ.
ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ, ಬೆರಳಚ್ಚ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.