ಸೂಲಿಬೆಲೆ: ಇಲ್ಲಿಗೆ ಸಮೀಪದ ಅತ್ತಿಬೆಲೆ ಬಳಿ ಭಾನುವಾರ ಬೆಳಗೆ ನಡೆದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಬೆಂಗಳೂರಿನ ಹೆಬ್ಬಾಳ ಕೆಂಪಾಪುರ ನಿವಾಸಿ ಸಿದ್ದಾರ್ಥ(15), ಹರ್ಷ ವರ್ಧನ್(18) ಮೃತ ವಿದ್ಯಾರ್ಥಿಗಳು.
ಮೃತ ಇಬ್ಬರು ವಿದ್ಯಾರ್ಥಿಗಳು ತನ್ನ ಇಬ್ಬರು ಸ್ನೇಹಿತರೊಂದಿಗೆ ದೇವನಹಳ್ಳಿ ಮಾರ್ಗವಾಗಿ ಚನ್ನೈ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಹೊಸಕೋಟೆಗೆ ಬಂದು ಬೆಳಗಿನ ಜಾವ ಮೂರು ಗಂಟೆ ಸಮಯದಲ್ಲಿ ದೇವನಹಳ್ಳಿಯತ್ತ ಹೊರಟಿದ್ದಾರೆ.
ಅತ್ತಿಬೆಲೆ ಸಮೀಪದಲ್ಲಿ ಇವರ ಕಾರಿನ ಹಿಂಬದಿಗೆ ಲಾರಿ ಡಿಕ್ಕಿ ಹೊಡೆದು ಹಿಂಬದಿಯಲ್ಲಿ ಕುಳಿತಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಿದ್ದಾರ್ಥ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಕಲಿಯುತ್ತಿದ್ದರೇ, ಹರ್ಷವರ್ದನ್ ದ್ವೀತಿಯ ಪಿಯುಸಿ ಕಲಿಯುತ್ತಿದ್ದನು ಎಂದು ಎಸ್.ಪಿ ಎಸ್ಪಿ ಸಿಕೆ ಬಾಬಾ ಪೊಲೀಸರು ತಿಳಿಸಿದ್ದಾರೆ.
ಘಟನೆ ಸ್ಥಳಕ್ಕೆ ಎಸ್.ಪಿ ಸಿ.ಕೆ ಬಾಬಾ, ಡಿವೈಎಸ್ಪಿ ಶಂಕರೇಗೌಡ ಅಣ್ಣ ಸಾಹೇಬ್ ಪಾಟೀಲ್, ಸಿಪಿಐ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.