ADVERTISEMENT

ಹೊಸಕೋಟೆ | ಬೇಸಿಗೆ ಬಿಸಿ: ದ್ವಿಶತಕ ಬಾರಿಸಿದ ಬೀನ್ಸ್‌

ಪ್ರಜಾವಾಣಿ ವಿಶೇಷ
Published 23 ಏಪ್ರಿಲ್ 2024, 5:42 IST
Last Updated 23 ಏಪ್ರಿಲ್ 2024, 5:42 IST
<div class="paragraphs"><p>ಹೊಸಕೋಟೆ ತಾಲ್ಲೂಕಿನ ಪಿಲ್ಲಗುಂಪೆ ಗ್ರಾಮದ ಬಳಿ ನಡೆಯುವ ಸಂತೆಯಲ್ಲಿ ಹಾಕಿರುವ ತರಕಾರಿ ಗುಡ್ಡೆಗಳು</p></div>

ಹೊಸಕೋಟೆ ತಾಲ್ಲೂಕಿನ ಪಿಲ್ಲಗುಂಪೆ ಗ್ರಾಮದ ಬಳಿ ನಡೆಯುವ ಸಂತೆಯಲ್ಲಿ ಹಾಕಿರುವ ತರಕಾರಿ ಗುಡ್ಡೆಗಳು

   

ಹೊಸಕೋಟೆ: ತರಕಾರಿಗಳ ಬೆಲೆ ಏರಿಕೆಯಾಗುತ್ತಿದ್ದು, ಬೇಸಿಗೆಯ ಸುಡ ಬಿಸಿಲಿನಂತೆ ಗ್ರಾಹಕರ ಕೈ ಸುಡುತ್ತಿದೆ.

ಸಾಂಬರಿಗೆ ಅಗತ್ಯವಾಗಿರುವ ಬೀನ್ಸ್‌ ಮತ್ತು ಕ್ಯಾರೆಟ್‌ ಬೆಲೆ ಶತನ ದಾಟ್ಟಿದೆ. ಬೀನ್ಸ್‌ ಬೆಲೆ ಏಕಾಏಕಿ ₹200 ಏರಿಕೆಯಾಗಿದ್ದು, ಅರ್ಧ ಮತ್ತು ಒಂದ ಕೆ.ಜಿ ತೆಗೆದುಕೊಳ್ಳುತ್ತಿದ್ದ ಗ್ರಾಹಕರು ಗ್ರಾಂ ಲೆಕ್ಕಕ್ಕೆ ಇಳಿದಿದ್ದಾರೆ.

ADVERTISEMENT

ಕಳೆದ ವಾರದ ಹಿಂದೆ ಒಂದು ಕೆ.ಜಿಗೆ ₹130–140ಗೆ ಮಾರಾಟ ಆಗುತ್ತಿದ್ದ ಬಿನ್ಸ್‌ ಈಗ ₹200ರ ಗಡಿ ದಾಡಿದೆ. ಕ್ಯಾರೆಟ್‌ ಬೆಲೆಯೂ ₹120ಕ್ಕೆ ಏರಿಕೆಯಾಗಿದೆ.

ಮೂಲಂಗಿ, ಬದನೆಕಾಯಿ, ಹಾಗಲಕಾಯಿ,  ಬೀಟ್‍ರೂಟ್, ನವಿಲುಕೋಸು, ಬೆಂಡೆಕಾಯಿ, ಹೀರೇಕಾಯಿ, ಮೆಣಸಿನಕಾಯಿ, ಕ್ಯಾಪ್ಸಿಕಮ್, ನುಗ್ಗೇಕಾಯಿ ಸೇರಿದಂತೆ ಹಲವು ತರಕಾರಿಗಳು ₹60ಕ್ಕಿಂತ ಕೆಳಗೆ ಇಳಿಯುತ್ತಿಲ್ಲ. ಈರುಳ್ಳಿ, ಆಲೂಗಡ್ಡೆ ಕೆಜಿಗೆ ₹25-35, ಬೆಳ್ಳುಳ್ಳಿ ಕೆಜಿಗೆ ₹250-₹300 ಮಾರಾಟವಾಗುತ್ತಿದೆ.

ಬೇಸಿಗೆ ಹಾಗೂ ಬರ ಆವರಿಸಿರುವುದರಿಂದ ತಾಲ್ಲೂಕು ಮಾತ್ರವಲ್ಲದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಎದುರಿಗಿದ್ದು, ತರಕಾರಿ, ತೋಟಗಾರಿಕೆ ಬೆಳೆ ಉತ್ಪಾದನೆ ಕುಸಿದಿದೆ. ಮುಂದಿನ ದಿನಗಳಲ್ಲಿ ತರಕಾರಿ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ವೆಂಕಟೇಶ್.

ಗುಡ್ಡೆ ‌‌ತರಕಾರಿಗೆ ಮೊರೆ

ಸಾಮಾನ್ಯವಾಗಿ ಸಂತೆಗಳಲ್ಲಿ, ರಸ್ತೆ ಬದಿಗಳಲ್ಲಿ ಸಣ್ಣಸಣ್ಣ ತಟ್ಟೆಗಳಲ್ಲಿ ತರಕಾರಿ ಇಟ್ಟು ಒಂದು ಗುಡ್ಡೆಗೆ ₹10 ರಂತೆ ಮಾರಾಟ ಮಾಡುತ್ತಿದ್ದರು. ಆದರೆ ಇದೀಗ ಆ ತರಕಾರಿ ಗುಡ್ಡೆ ಒಂದಕ್ಕೆ ₹20 ನೀಡಬೇಕಿದೆ. ಹೆಚ್ಚು ಬೆಲೆ ತೆತ್ತು ಕೆಜಿ ಲೆಕ್ಕದಲ್ಲಿ ಖರೀದಿಸಲು ಹಿಂಜರಿಯುವ ಗ್ರಾಹಕರು ಗುಡ್ಡೆ ತರಕಾರಿಗೆ ಮೊರೆ ಹೋಗುತ್ತಿದ್ದಾರೆ. ಇದರೊಂದಿಗೆ ಸೊಪ್ಪಿನ ಬೆಲೆಯೂ ಹೆಚ್ಚಳವಾಗಿದ್ದು, ಪ್ರತಿ ಕಟ್ಟಿಗೆ ₹30 ನೀಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.