ADVERTISEMENT

ಸಂಕ್ರಾತಿ | ಪಟ್ಟಣಕ್ಕೆ ಬಾರದ ಗ್ರಾಹಕರು; ವ್ಯಾಪಾರಿಗಳಲ್ಲಿ ನಿರಾಶೆ

ಹಳ್ಳಿಗಳಲ್ಲಿ ಮನೆ ಬಾಗಿಲಿಗೆ ಸಂಕ್ರಾತಿ ವ್ಯಾಪಾರ

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 15:19 IST
Last Updated 13 ಜನವರಿ 2024, 15:19 IST
ವಿಜಯಪುರದಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕಾಗಿ ಅವರೆಕಾಯಿ, ಗೆಣಸು, ಕಬ್ಬಿನ ಜಲ್ಲೆಗಳನ್ನು ಮಾರಾಟಕ್ಕೆ ಇಟ್ಟಿರುವ ವ್ಯಾಪಾರಿಗಳು
ವಿಜಯಪುರದಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕಾಗಿ ಅವರೆಕಾಯಿ, ಗೆಣಸು, ಕಬ್ಬಿನ ಜಲ್ಲೆಗಳನ್ನು ಮಾರಾಟಕ್ಕೆ ಇಟ್ಟಿರುವ ವ್ಯಾಪಾರಿಗಳು   

ವಿಜಯಪುರ(ದೇವನಹಳ್ಳಿ): ಸುಗ್ಗಿಹಬ್ಬ ಮಕರ ಸಂಕ್ರಾಂತಿಗೆ ಅಗತ್ಯವಾಗಿ ಬೇಕಾಗಿರುವ ಕಬ್ಬು, ಗೆಣಸು, ಅವರೆಕಾಯಿ, ಕಡಲೇಕಾಯಿ, ಹೂವು, ಬಾಳೆಹಣ್ಣು ಮಾರಾಟಕ್ಕೆ ವ್ಯಾಪಾರಿಗಳು ಅಣಿಯಾಗಿದ್ದು, ಆದರೆ ನಿರೀಕ್ಷೆಯಂತೆ ಗ್ರಾಹಕರು ಬಾರದಿರುವುದು ನಿರಾಶೆ ಮೂಡಿಸಿದೆ.

ತೀವ್ರ ಮಳೆಯ ಕೊರತೆಯ ಕಾರಣದಿಂದ ಸ್ಥಳೀಯವಾಗಿ ರೈತರ ಹೊಲಗಳಲ್ಲಿ ಅವರೆಕಾಯಿ ಬೆಳೆಯದ ಕಾರಣ, ವ್ಯಾಪಾರಿಗಳು, ಚಿಂತಾಮಣಿ, ಹಾಗೂ ಚಿಕ್ಕಬಳ್ಳಾಪುರದ ಮಾರುಕಟ್ಟೆಗಳಲ್ಲಿ ಖರೀದಿ ಮಾಡಿಕೊಂಡು ಬಂದು ಮಾರಾಟ ಮಾಡುತ್ತಿದ್ದಾರೆ.

ಕಬ್ಬು ಒಂದು ಜಲ್ಲೆ ₹50, ಗೆಣಸು ಕೆ.ಜಿ. ₹50, ಕಡಲೇಕಾಯಿ ₹100, ಸಾಮ್ರಾಟ್ ಕಡಲೇಕಾಯಿ ₹120, ಅವರೆಕಾಯಿ ಒಂದೂವರೆ ಕೆ.ಜಿ. ₹100 ಗೆ ಮಾರಾಟವಾಗುತ್ತಿದ್ದು, ಭಾನುವಾರದಂದು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.

ADVERTISEMENT

ಗುಲಾಬಿ ಹೂ ಕೆ. ಜಿ ಬೆಲೆ ₹160 ಇದ್ದದು ಈಗ ₹200, ಕನಕಾಂಬರ ₹1,200 ರೂಪಾಯಿ ಇದ್ದದ್ದು 1,500, ಕಾಕಡಾ ₹400 ರಿಂದ ₹600, ಚೆಂಡು ಹೂ ₹30 ರಿಂದ ₹60 ಸೇವಂತಿಗೆ 120 ರಿಂದ 160 ಆಗಿದೆ.

ಬಹುತೇಕ ವ್ಯಾಪಾರಿಗಳು, ಸರಕುಸಾಗಾಣಿಕೆಯ ವಾಹನಗಳನ್ನು ಸಿದ್ಧಪಡಿಸಿಕೊಂಡು, ಹಳ್ಳಿ, ಹಳ್ಳಿಗೂ ಹೋಗಿ, ಗೆಣಸು, ಕಡಲೇಕಾಯಿ, ಅವರೆಕಾಯಿ, ಕಬ್ಬು, ಹೂವು, ಹಣ್ಣುಗಳನ್ನು ಮಾರಾಟ ಮಾಡುತ್ತಿರುವ ಕಾರಣ, ಹಳ್ಳಿಗಳಿಂದ ಪಟ್ಟಣಕ್ಕೆ ಬಂದು ಖರೀದಿ ಮಾಡುತ್ತಿದ್ದ ಬಹುತೇಕ ಗ್ರಾಹಕರು ಪಟ್ಟಣಕ್ಕೆ ಬಾರದೇ ಹಳ್ಳಿಗಳಲ್ಲೆ ಖರೀದಿ ಮಾಡಿಕೊಳ್ಳುತ್ತಿದ್ದಾರೆ.

ಇದರಿಂದ ಪಟ್ಟಣದಲ್ಲಿ ವ್ಯಾಪಾರಕ್ಕಾಗಿ ಬಂಡವಾಳ ಹೂಡಿಕೆ ಮಾಡಿರುವ ವ್ಯಾಪಾರಿಗಳು, ಗ್ರಾಹಕರ ಕೊರತೆಯನ್ನು ಎದುರಿಸುತ್ತಿದ್ದು, ಹಾಕಿರುವ ಬಂಡವಾಳ ವಾಪಸ್ಸು ಬರುತ್ತೋ ಇಲ್ಲವೋ ಅನ್ನುವ ಭೀತಿಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.