ADVERTISEMENT

ವಿಜಯಪುರ: ರೈತನಿಗೆ ಆರ್ಥಿಕ ಬಲ ತುಂಬಿದ ಜಪಾನ್‌ ಸೀಬೆ

ಆರು ತಿಂಗಳಿಗೊಮ್ಮೆ 11 ಟನ್‌ ಫಸಲು । ದೆಹಲಿಗೆ ರಪ್ತು । ₹2.5 ಲಕ್ಷ ವಾರ್ಷಿಕ ಆದಾಯ

ಎಂ.ಮುನಿನಾರಾಯಣ
Published 6 ಅಕ್ಟೋಬರ್ 2024, 6:16 IST
Last Updated 6 ಅಕ್ಟೋಬರ್ 2024, 6:16 IST
<div class="paragraphs"><p>ವಿಜಯಪುರ ಹೋಬಳಿ ಗಡ್ಡದನಾಯಕನಹಳ್ಳಿಯ ರೈತ ಸಂತೋಷ್ ಅವರು ಬೆಳೆದಿರುವ ಜಪಾನೀಸ್ ರೆಡ್ ತಳಿಯ ಸೀಬೆಹಣ್ಣುಗಳನ್ನು ಪ್ಯಾಕ್‌ ಮಾಡುತ್ತಿರುವುದು</p></div>

ವಿಜಯಪುರ ಹೋಬಳಿ ಗಡ್ಡದನಾಯಕನಹಳ್ಳಿಯ ರೈತ ಸಂತೋಷ್ ಅವರು ಬೆಳೆದಿರುವ ಜಪಾನೀಸ್ ರೆಡ್ ತಳಿಯ ಸೀಬೆಹಣ್ಣುಗಳನ್ನು ಪ್ಯಾಕ್‌ ಮಾಡುತ್ತಿರುವುದು

   

ವಿಜಯಪುರ(ದೇವನಹಳ್ಳಿ): ಹೋಬಳಿಯ ಗಡ್ಡದನಾಯಕನಹಳ್ಳಿಯ ರೈತರೊಬ್ಬರು ಜನಾನೀಸ್ ರೆಡ್ ತಳಿಯ ಸೀಬೆಯನ್ನು ಬೆಳೆದು ವಾರ್ಷಿಕವಾಗಿ ₹2.50 ಲಕ್ಷ ಲಾಭ ಗಳಿಸುತ್ತಿದ್ದಾರೆ.

ರೈತ ಸಂತೋಷ್ ಅವರು ತಮ್ಮ ಒಂದು ಎಕರೆಯಲ್ಲಿ 1,100 ಗಿಡಗಳನ್ನು ನಾಟಿ ಮಾಡಿದ್ದು, ವರ್ಷದಲ್ಲಿ ಎರಡು ಬೆಳೆ ತೆಗೆಯುತ್ತಿದ್ದಾರೆ. ಒಂದು ಬೆಳೆಗೆ 11 ಟನ್ ಫಸಲು ಬರುತ್ತಿದೆ. ಇಷ್ಟನ್ನು ದೆಹಲಿಗೆ ರಫ್ತು ಮಾಡುತ್ತಿದ್ದಾರೆ.

ADVERTISEMENT

ಬೀಜ ಕಡಿಮೆ ಇರುವ ಈ ಹಣ್ಣು ಬಲು ರುಚಿಯಾಗಿದ್ದು, ಕೆ.ಜಿಗೆ ₹120 ಸಿಗುತ್ತಿದ್ದು, ವರ್ಷಕ್ಕೆ ₹2.50 ಲಕ್ಷ ಆದಾಯ ಬರುತ್ತಿದೆ ಎನ್ನುತ್ತಾರೆ ಸಂತೋಷ್‌.

ತೀವ್ರ ಮಳೆಯ ಕೊರತೆಯಿದ್ದರೂ ಕೃಷಿಹೊಂಡದಲ್ಲಿ ಸಂಗ್ರಹವಾಗುತ್ತಿರುವ ನೀರು ಬಳಕೆ ಮಾಡಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆ.

ಗುಜರಾತಿನ ವಡೋದರಲ್ಲಿನ ಸ್ನೇಹಿತರಿಂದ ಪರಿಚಯವಾದ ಜಪಾನೀಸ್ ರೆಡ್ ತಳಿಯ ಸೀಬೆಹಣ್ಣಿನ ಸಸಿಗಳನ್ನು ತಂದು, ತೋಟದಲ್ಲಿ ನಾಟಿ ಮಾಡಿದ್ದು, ಹಣ್ಣು ಬಿಡಿಸಿ, ನೇರವಾಗಿ ದೆಹಲಿಗೆ ಸರಬರಾಜು ಮಾಡಲಾಗುತ್ತಿದೆ.

ಸಾಗಾಣಿಕೆಗೆ ಕೆ.ಜಿ.ಗೆ ₹30 ಖರ್ಚು ಬರುತ್ತದೆ. ನಾವು ತೋಟದಲ್ಲಿ ಬಿಡಿಸಿ, ಬಾಕ್ಸ್‌ನಲ್ಲಿ ತುಂಬಿಸಿ, ಬೆಂಗಳೂರಿನ ರೈಲು ನಿಲ್ದಾಣಕ್ಕೆ ತಲುಪಿಸುತ್ತೇವೆ. ಅಲ್ಲಿಂದ ದೆಹಲಿಗೆ ಹೋಗುತ್ತದೆ ಎಂದು ಸಂತೋಷ್‌ ವಿವರಿಸಿದರು.

ಸೀಬೆ ಹಣ್ಣು ಕೃಷಿ ಮತ್ತು ಹಣ್ಣು ಪ್ಯಾಕ್‌ ಕೆಲಸವವನ್ನು ಸ್ಥಳೀಯ ಮಹಿಳೆಯರಿಗೆ ವಹಿಸಿದ್ದೇವೆ. ಇದರಿಂದ ನಾವು ಲಾಭಗಳಿಸುವ ಜತೆಗೆ ಮಹಿಳೆಯರಿಗೆ ಉದ್ಯೋಗ ನೀಡುತ್ತಿದ್ದೇವೆ.
ಸಂತೋಷ್ ರೈತ

ಬೆಳೆ ರಕ್ಷಣೆ ಹೇಗೆ?

ಮರದಲ್ಲಿ ಹೂ ಬಿಟ್ಟು ಪಿಂದೆಯಾಗುತ್ತಿದ್ದಂತೆ ಕವರ್ ಕಟ್ಟುತ್ತೇವೆ. ಇದರಿಂದ ಹಣ್ಣಿನ ಮೇಲೆ ತೇವಾಂಶವಿರುವುದರ ಜೊತೆಗೆ ಧೂಳಿನಿಂದ ರಕ್ಷಿಸಲಾಗುತ್ತದೆ. ಕೀಟಗಳು ಬಂದು ಕೂರುವುದಕ್ಕೆ ಅವಕಾಶ ಇರುವುದಿಲ್ಲ. ಪ್ರತಿನಿತ್ಯ ಒಂದು ಗಿಡಕ್ಕೆ 30 ಲೀಟರ್ ನೀರು ಕೊಡಲೇ ಬೇಕು ಎನ್ನುತ್ತಾರೆ ಅವರು. ಮಿಲಿಬಗ್ ರೋಗ ಮಳೆಗಾಲದಲ್ಲಿ ಮಾತ್ರ ಬರುತ್ತದೆ. ರೋಗ ಬರುವುದಕ್ಕಿಂತ ಮೊದಲೇ ಮುಂಜಾಗ್ರತೆ ವಹಿಸಬೇಕು. ಅದನ್ನು ನಿಯಂತ್ರಿಸಲು ವರ್ಷದಲ್ಲಿ 10 ಬಾರಿ ಔಷಧಿ ಸಿಂಪಡಣೆ ಮಾಡಬೇಕು. ಯಾವುದೇ ವಾತಾವರಣದಲ್ಲಿಯೂ ಈ ತಳಿಯನ್ನು ಬೆಳೆಬಹುದು. ಕೊಟ್ಟಿಗೆ ಗೊಬ್ಬರ ಬೇವಿನ ಹಿಂಡಿ ಎಂ.ಪಿ.ಕೆ.ಗೊಬ್ಬರ ಹಾಕಬಹುದು ಎಂದು ರೈತ ಸಂತೋಷ್ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.