ವಿಜಯಪುರ (ದೇವನಹಳ್ಳಿ): ಪಟ್ಟಣದ ಯಲುವಹಳ್ಳಿ ರಸ್ತೆಯಲ್ಲಿರುವ ಮುನೇಶ್ವರ ದೇವಾಲಯದ ಸಮೀಪದಲ್ಲಿ 9ನೇ ಶತಮಾನದ ತುರುಗೋಳ್ ಶಾಸನವೊಂದು ಪತ್ತೆಯಾಗಿದ್ದು, ಇತಿಹಾಸ ತಜ್ಞರು ಶನಿವಾರ ಶಾಸನದಲ್ಲಿ ಬರೆದಿರುವ ಮಾಹಿತಿಯನ್ನು ಸಂಗ್ರಹಿಸಿದರು.
ಇಲ್ಲಿ ಸಿಕ್ಕಿರುವ ತುರುಗೋಳ್ ಶಾಸನದಲ್ಲಿ ಬರೆದಿರುವ ಲಿಪಿ, ಹಳಗನ್ನಡದಲ್ಲಿದೆ. 9ನೇ ಶತಮಾನದಲ್ಲಿ ಶತ್ರುಗಳೊಂದಿಗೆ ಯುದ್ಧ ಮಾಡಿ, ಗೋವು ರಕ್ಷಣೆ ಮಾಡಿರುವ ವೀರನಿಗೆ ಗದ್ದೆಯನ್ನು ದಾನವಾಗಿ ನೀಡಿರುವ ಕುರಿತು ಶಾಸನವಿದೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಸಂಸ್ಥಾಪಕ ಸದಸ್ಯ ಪಿ.ವಿ.ಕೃಷ್ಣಮೂರ್ತಿ ತಿಳಿಸಿದರು.
ಕರ್ನಾಟಕ ಇತಿಹಾಸ ಅಕಾಡೆಮಿಯ ಇತಿಹಾಸ ತಜ್ಞ ಪ್ರೊ.ಕೆ.ಆರ್.ನರಸಿಂಹನ್, ಇಂತಹ ಶಾಸನ ಮತ್ತು ವೀರಗಲ್ಲು ಇತಿಹಾಸ ತಿಳಿಯಲು ಆಧಾರವಾಗಿರುತ್ತವೆ. ಇಂತಹ ಶಾಸನಗಳನ್ನು ಕಾಪಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇದರಿಂದ ಮುಂದಿನ ಪೀಳಿಗೆಗೆ ಈ ಪ್ರದೇಶದ ಇತಿಹಾಸ ತಿಳಿಸುವುದಕ್ಕೆ ಸಹಕಾರಿಯಾಗುತದೆ ಎಂದರು.
ಕರ್ನಾಟಕ ಇತಿಹಾಸ ಅಕಾಡೆಮಿಯ ಕಮಿಟಿ ಸದಸ್ಯ ಕೆ.ಧನಪಾಲ್, ಸುದರ್ಶನ್, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.