ADVERTISEMENT

ದೇವನಹಳ್ಳಿ | ಕನ್ನಡದ ಕಂಪು; ಮಕ್ಕಳೇ ಅತಿಥಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 13:41 IST
Last Updated 15 ನವೆಂಬರ್ 2024, 13:41 IST
ವಿಜಯಪುರದ ರಾಜೀವ್ ನಗರದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ‘ಶಾಲೆಯಿಂದ ಶಾಲೆಗೆ ಕನ್ನಡದ ಕಂಪು’ ಕಾರ್ಯಕ್ರಮವನ್ನು ಮಕ್ಕಳು ಉದ್ಘಾಟಿಸಿದರು
ವಿಜಯಪುರದ ರಾಜೀವ್ ನಗರದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ‘ಶಾಲೆಯಿಂದ ಶಾಲೆಗೆ ಕನ್ನಡದ ಕಂಪು’ ಕಾರ್ಯಕ್ರಮವನ್ನು ಮಕ್ಕಳು ಉದ್ಘಾಟಿಸಿದರು   

ವಿಜಯಪುರ(ದೇವನಹಳ್ಳಿ): ಪಟ್ಟಣದ ರಾಜೀವ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಕ್ಕಳ ದಿನಾಚರಣೆ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು ನಗರ ಘಟಕದಿಂದ ‘ಶಾಲೆಯಿಂದ ಶಾಲೆಗೆ ಕನ್ನಡದ ಕಂಪು’ ಕಾರ್ಯಕ್ರಮ ನಡೆಯಿತು.

ಶಾಲೆಯ 7ನೇ ತರಗತಿ ವಿದ್ಯಾರ್ಥಿ ತೇಜಸ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಮಕ್ಕಳೇ ಅತಿಥಿಯಾಗಿ ವೇದಿಕೆಯಲ್ಲಿ ಕುಳಿತುಕೊಂಡು ಕಾರ್ಯಕ್ರಮ ನಡೆಸಿಕೊಟ್ಟರು. ಕುರುಕ್ಷೇತ್ರ ಪೌರಾಣಿಕ ನಾಟಕದ ಸಂಭಾಷಣೆ ಹೇಳುವ ಮೂಲಕ ವಿದ್ಯಾರ್ಥಿನಿಯರು ಗಮನ ಸೆಳೆದರು.

ಕಸಾಪ ನಗರ ಘಟಕ ಅಧ್ಯಕ್ಷ ಜೆ.ಎನ್.ಶ್ರೀನಿವಾಸ್, ಮಕ್ಕಳ ಹಕ್ಕು ರಕ್ಷಣೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಕೊನೆಗಣಿಸಲು ಎಲ್ಲರು ಬದ್ಧರಾಗಿಬೇಕು. ಮಕ್ಕಳ ಮಾರಾಟದ ಜಾಲ, ಮಕ್ಕಳನ್ನು ಇಟ್ಟುಕೊಂಡು ಬಿಕ್ಷೆ ಬೇಡುವಂತಹ ವ್ಯವಸ್ಥಿತವಾದ ಜಾಲಗಳ ಮೂಲವನ್ನು ಪತ್ತೆಹಚ್ಚಿ, ಬುಡಸಮೇತವಾಗಿ ನಾಶಗೊಳಿಸಬೇಕು. ಮಕ್ಕಳ ಆರೋಗ್ಯ ಸುಧಾರಣೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು ಎಂದು ಹೇಳಿದರು.

ADVERTISEMENT

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿದರು.

ಮುಖ್ಯಶಿಕ್ಷಕ ನಾರಾಯಣಸ್ವಾಮಿ, ಸಹಶಿಕ್ಷಕರಾದ ಪ್ರಕಾಶ್, ಗೀತಾಬಸವರಾಜ್, ಕಸಾಪ ನಗರ ಘಟಕದ ಕಾರ್ಯದರ್ಶಿ ಪ್ರಕಾಶ್, ಸಂಗೀತ ನಿರ್ದೇಶಕ ಎಂ.ವೆಂಕಟರಮಣ ನಾಯುಡು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.