ADVERTISEMENT

ಆಯಾ ಶಾಲೆಗಳಲ್ಲೆ ಬಿಸಿಯೂಟ ವಿತರಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 5:16 IST
Last Updated 7 ಏಪ್ರಿಲ್ 2024, 5:16 IST
ವಿಜಯಪುರದ ಸರ್ಕಾರಿ ಶಾಲೆಯೊಂದರಲ್ಲಿ ಮದ್ಯಾಹ್ನದ ಬಿಸಿಯೂಟ ಸವಿಯುತ್ತಿರುವ ಮಕ್ಕಳು
ವಿಜಯಪುರದ ಸರ್ಕಾರಿ ಶಾಲೆಯೊಂದರಲ್ಲಿ ಮದ್ಯಾಹ್ನದ ಬಿಸಿಯೂಟ ಸವಿಯುತ್ತಿರುವ ಮಕ್ಕಳು   

ವಿಜಯಪುರ(ದೇವನಹಳ್ಳಿ): ರಾಜ್ಯ ಸರ್ಕಾರ, ಬರಗಾಲ ಪೀಡಿತ ಪ್ರದೇಶಗಳಲ್ಲಿ ಸರ್ಕಾರಿ, ಅನುದಾನಿತ ಶಾಲೆಗಳ 1-10ನೇ ತರಗತಿ ಮಕ್ಕಳಿಗೆ ಬೇಸಿಗೆಯ ರಜೆಯ ದಿನಗಳಲ್ಲೂ ಮದ್ಯಾಹ್ನದ ಬಿಸಿಯೂಟ ವಿತರಿಸುವ ಕ್ರಮ ಸ್ವಾಗತಾರ್ಹ. ಮಕ್ಕಳಿರುವ ಗ್ರಾಮಗಳಲ್ಲೆ ಬಿಸಿಯೂಟ ವಿತರಣೆ ಮಾಡಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯು ಮಧ್ಯಾಹ್ನದ ಬಿಸಿಯೂಟ ವಿತರಣೆಗೆ ಬಿಸಿಯೂಟದ ಕೇಂದ್ರಗಳನ್ನಾಗಿ ಹೆಚ್ಚು ವಿದ್ಯಾರ್ಥಿಗಳಿರುವ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳನ್ನು ಗುರುತಿಸಿದೆ.

ಇದರಿಂದ ಮಕ್ಕಳು, ಸುಡುವ ಬಿಸಿಲಿನಲ್ಲಿ ಒಂದೆರಡು ಕಿ.ಮೀ. ದೂರ ನಡೆದುಕೊಂಡು ಹೋಗಿ ಊಟ ಮಾಡಿಕೊಂಡ ಬರಬೇಕಿದೆ. ಈ ಬೇಸಿಗೆ ಬಿಸಿಲಿನಲ್ಲಿ ಮಕ್ಕಳು ಓಡಾಡುವುದು ಕಷ್ಟ ಆಗಲಿದೆ ಎಂದು ಪೋಷಕರು ಸರ್ಕಾರದ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಮಧ್ಯಾಹ್ನದ ಬಿಸಿಯೂಟದ ಜವಾಬ್ದಾರಿಯನ್ನು ಶಿಕ್ಷಕರಿಗೆ ವಹಿಸಿದರೆ, ಅವರು ಕುಟುಂಬದವರ ಕಡೆಗೆ ಗಮನಹರಿಸುವುದು ಬೇಡವೇ? ಸರ್ಕಾರ, ಪರ್ಯಾಯವಾಗಿ ಏನಾದರೂ ವ್ಯವಸ್ಥೆ ಮಾಡಲಿ, ಬೇಸಿಗೆ ರಜೆಯ ಸಮಯದಲ್ಲಿ ಆಹಾರ ಧಾನ್ಯವನ್ನು ಮಕ್ಕಳ ಕುಟುಂಬಗಳಿಗೆ ನೀಡಿದರೆ ಅವರೂ ತಂದೆ, ತಾಯಿಯೊಂದಿಗೆ ಸಂತಸದಿಂದ ಇರುತ್ತಾರೆ’ ಎಂದು ಹೆಸರೇಳಲಿಚ್ಚಿಸದ ಮುಖ್ಯಶಿಕ್ಷಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ಆಯಾಯ ಶಾಲೆಯಲ್ಲೇ ಬಿಸಿಯೂಟ ನೀಡಬೇಕೆಂಬ ಪೋಷಕರ ಒತ್ತಾಯಿಸುತ್ತಿರುವ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.
–ಮುನಿಯಪ್ಪ, ಸಿಆರ್‌ಪಿ ವಿಜಯಪುರ ಕ್ಲಸ್ಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.