ADVERTISEMENT

ದೇವನಹಳ್ಳಿ | ರಾಗಿ ಕಟಾವು ಯಂತ್ರಕ್ಕೆ ಬಾಡಿಗೆ ನಿಗದಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 13:52 IST
Last Updated 15 ನವೆಂಬರ್ 2024, 13:52 IST
ರಾಗಿ ಕಟಾವು ಯಂತ್ರ (ಸಾಂದರ್ಭಿಕ ಚಿತ್ರ)
ರಾಗಿ ಕಟಾವು ಯಂತ್ರ (ಸಾಂದರ್ಭಿಕ ಚಿತ್ರ)   

ವಿಜಯಪುರ(ದೇವನಹಳ್ಳಿ): ರಾಗಿ ಕಟಾವು ಯಂತ್ರಗಳ ಬಾಡಿಗೆಯನ್ನು ಜಿಲ್ಲಾಡಳಿತ ಜಿಲ್ಲಾಡಳಿತ ನಿಗದಿ ಮಾಡಿದ್ದು, ಇದಕ್ಕಿಂತ ಹೆಚ್ಚಿನ ದರವನ್ನು ರೈತರಿಂದ ಪಡೆದರೆ ಅಂತಹ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣಾ ಕಾಯಿದೆ 2005 ರಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್ ಬಾಲಕೃಷ್ಣ ತಿಳಿಸಿದ್ದಾರೆ.

ಕಳೆದ ವರ್ಷದಲ್ಲಿ ನಿಗದಿಪಡಿಸಿರುವಂತೆ ಈ ವರ್ಷವೂ ಪ್ರತಿ ಗಂಟೆಗೆ ನ್ಯೂ ಹಾಲೆಂಡ್ ಜಾಮೀರ್ ಕಂಪನಿಯ ದೊಡ್ಡ ಕಟಾಕ್ಕೆ ₹3,350, ಕ್ಲಾಸ್ ಮತ್ತು ಎಸಿಸಿ ಕಂಪನಿಯ ಯಂತ್ರಗಳಿಗೆ ಗಂಟೆಗೆ ₹2,700 ಮಾತ್ರ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಬೆಳೆ ಕಟಾವು ಮಾಡುವಾಗ ಚಾಲಕನನ್ನು ಹೊರತುಪಡಿಸಿ, ಯಾರನ್ನೂ ಹತ್ತಿರಕ್ಕೆ ಬಿಟ್ಟುಕೊಳ್ಳದಂತೆ ಎಚ್ಚರವಹಿಸಬೇಕು. ರೈತರೂ ತಮ್ಮ ಹೊಲ ಕಟಾವು ಮಾಡಿಸುವಾಗ ಯಂತ್ರಗಳಿಂದ ದೂರವಿರಬೇಕು. ಯಂತ್ರ ಸ್ಥಗಿತಗೊಳಿಸಿದ ನಂತರ ರಾಗಿ ತುಂಬಿಕೊಳ್ಳಲು ಹೋಗಬೇಕು. ಯಂತ್ರಗಳಲ್ಲಿ ಕೆಲಸ ಮಾಡುವ ಇತರೆ ಕಾರ್ಮಿಕರೂ ಎಚ್ಚರಿಕೆಯಿಂದ ಇರಬೇಕು. ಮಕ್ಕಳನ್ನು ಯಾವುದೇ ಕಾರಣಕ್ಕೂ ಯಂತ್ರಗಳ ಸಮೀಪಕ್ಕೆ ಬಿಡಬಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.