ADVERTISEMENT

ದೇವನಹಳ್ಳಿ | ಜಿಟಿ ಜಿಟಿ ಮಳೆ: ರಾಗಿ ಕಟಾವಿಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 13:51 IST
Last Updated 15 ನವೆಂಬರ್ 2024, 13:51 IST
ವಿಜಯಪುರದ ಕೆರೆಕೋಡಿಯ ಬಳಿಯಲ್ಲಿ ಕಟಾವಿಗೆ ಬಂದಿರುವ ರಾಗಿ ಬೆಳೆ ಮಳೆಯಿಂದಾಗಿ ನೆಲಕ್ಕುರುಳಿರುವುದು
ವಿಜಯಪುರದ ಕೆರೆಕೋಡಿಯ ಬಳಿಯಲ್ಲಿ ಕಟಾವಿಗೆ ಬಂದಿರುವ ರಾಗಿ ಬೆಳೆ ಮಳೆಯಿಂದಾಗಿ ನೆಲಕ್ಕುರುಳಿರುವುದು   

ವಿಜಯಪುರ(ದೇವನಹಳ್ಳಿ): ಆಗಾಗ್ಗೆ ಬೀಳುತ್ತಿರುವ ಜಿಟಿ ಜಿಟಿ ಮಳೆಯಿಂದ ರಾಗಿ ಕಟಾವಿಗೆ ಅಡ್ಡಿಯಾಗಿದೆ.

ಮುಂಗಾರು ಆರಂಭದಲ್ಲಿ ಬಿತ್ತನೆ ಮಾಡಿರುವ ರಾಗಿ ಬೆಳೆ ಕಟಾವಿಗೆ ಸಿದ್ಧವಾಗಿವೆ. ತೆನೆಗಳು ಕಾಳು ತುಂಬಿಕೊಂಡು ತೆನೆಗಳು ಕೆಂಪಾಗಿವೆ. ತೆನೆ ಕಟಾವಿಗೆ ರೈತರು ಮುಂದಾಗಿದ್ದಾರೆ. ಆದರೆ ಜಿಟಿ ಜಿಟಿ ಮಳೆಯಿಂದ ಕಟಾವು ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ.

ಹೊಲಗಳಲ್ಲಿ ತೆನೆತುಂಬಿದ ಪೈರುಗಳು ನೆಲಕ್ಕುರುಳಿವೆ. ಮಳೆ ಈಗ ಮುಂದುವರೆದರೆ ತೆನೆಯಲ್ಲಿ ಬಲಿತಿರುವ ಕಾಳು ಮೊಳಕೆ ಬರುವ ಸಾಧ್ಯತೆಗಳಿವೆ. ರಾಗಿ ಕಾಳು ಮೊಳಕೆ ಬಂದರೆ ರೈತರ ಶ್ರಮವೆಲ್ಲಾ ವ್ಯರ್ಥವಾಗಲಿದೆ ಎಂದು ರೈತ ಆಂಜಿನಪ್ಪ ಹೇಳಿದರು.

ADVERTISEMENT

ಕೆಲ ದಿನಗಳ ಹಿಂದೆ ಬಿತ್ತನೆ ಮಾಡಿರುವ ಬೆಳೆಗಳಿಗೆ ಮಳೆ ಅಗತ್ಯವಿದೆ. ಆದರೆ, ಮೊದಲು ಬಿತ್ತನೆಯಾಗಿರುವ ಬೆಳೆಗೆ ಈಗ ಬೀಳುತ್ತಿರುವ ಮಳೆ ಹಾನಿಯುಂಟು ಮಾಡುತ್ತದೆ. ಮಳೆ ಬಿದ್ದರೆ, ಒಂದು ವರ್ಗದ ರೈತರಿಗೆ ಸಂತಸವಾಗುತ್ತಿದ್ದರೆ, ಬೆಳೆಯಾಗಿರುವ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ರೈತ ರಾಮಾಂಜಿನಪ್ಪ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.