ಮಾಗಡಿ: ತಾಲ್ಲೂಕಿನ ಜ್ಯೋತಿಪಾಳ್ಯದಲ್ಲಿ ಅಜ್ಜಿ ಕಲಿಕಾ ಕೇಂದ್ರ ಎರಡನೇ ವರ್ಷದ ವಾರ್ಷಿಕೋತ್ಸವ ಹಾಗೂ ಕಲಿಕಾ ಕೇಂದ್ರದ ಸಂಸ್ಥಾಪಕರಾದ ಸಬಿಹಾ ರಶ್ಮಿ 75 ವರ್ಷದ ಜನ್ಮ ದಿನದ ಅಂಗವಾಗಿ ವಾಲಿಬಾಲ್ ಪಂದ್ಯಾವಳಿ ಏರ್ಪಡಿಸಲಾಗಿತ್ತು.
ಎರಡು ದಿನಗಳ ಕಾಲ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಎಂಟು ತಂಡಗಳು ಭಾಗವಹಿಸಿದ್ದವು. ಮಾಗಡಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನ ಪಡೆದಿದ್ದು ದ್ವಿತೀಯ ಸ್ಥಾನವನ್ನು ಅಜ್ಜಿ ಕಲಿಕಾ ಕೇಂದ್ರದ ತಂಡ ಪಡೆದುಕೊಂಡಿತು.
ಪ್ರಥಮ ಸ್ಥಾನ ಪಡೆದ ಪ್ರಥಮ ದರ್ಜೆ ಕಾಲೇಜಿನ ಆಟಗಾರರಾದ ಹೇಮಂತ್ ಕುಮಾರ್, ಪರ್ವೀಜ್ ನೇಮಂತ್, ನಮಾಜ್ ಖಾನ್, ಅಬ್ರಾನ್ ಪಾಷಾ, ಹರ್ಷ ಹಾಗೂ ದ್ವಿತೀಯ ಸ್ಥಾನ ಪಡೆದ ಅಜ್ಜಿ ಕಲಿಕಾ ಕೇಂದ್ರದ ಆಟಗಾರರಾದ ಶರತ್ ಕುಮಾರ್ ನಾಯಕ್, ಗಣೇಶ್, ಪ್ರವೀಣ್ ಕುಮಾರ್ ನಾಯಕ್, ಭರತ್ ಕುಮಾರ್ ನಾಯಕ್, ಸಂತೋಷ್ ಮತ್ತು ಮುನಿಶ್ ಕುಮಾರ್ ತಂಡದಲ್ಲಿ ಇದ್ದರು.
ವಾರ್ಷಿಕೋತ್ಸವ ಅಂಗವಾಗಿ ಭಾಷಣ ಸ್ಪರ್ಧೆ, ನಾಟಕ ಪ್ರದರ್ಶನವನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.
ಕಾರ್ಯಕ್ರಮದ ಆಯೋಜಕರಾದ ಅಜ್ಜಿ ಕಲಿಕಾ ಕೇಂದ್ರದ ಎಎಲ್‌ಸಿ ಟ್ರಸ್ಟ್ ಶಬ್ನಮ್ ಹಶ್ಮಿ, ಟ್ರಸ್ಟ್‌ನ ಸುಜಾ ಸುಬ್ರಮಣಿಯನ್, ರೇಷ್ಮಾ ಜಹೀರ್, ದೆಹಲಿ ಡಾ.ಕೌಸ್ ವಿಜಾರ್ತ, ಸೋಹೈಲ್ ಹಶ್ಮಿ, ಶೆಹ್ಲಾ ಹಶ್ಮಿ ಗ್ರೇವಾಲ್, ಅನಿಲ್, ಶಶಾಂಕ್ ರಾವತ್, ಅನು, ಪಲ್ಲವಿ, ಮನೀಶ್ ಕುಮಾರ್ ಬಾನೊ ಹಾಗೂ ಗ್ರಾಮದ ಮುಖಂಡರಾದ ಜ್ಯೋತಿಪಾಳ್ಯ ರಾಮಣ್ಣ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.