ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ವಿಜಯ ಸಾಧಿಸಿ 200 ವರ್ಷಗಳು ತುಂಬಿವೆ. ಇದರ ಪ್ರಯುಕ್ತ ಬುಧವಾರ (ಫೆಬ್ರುವರಿ 21) ಇಲ್ಲಿಯ ಕೋಟೆ ಆವರಣದಲ್ಲಿ ‘ನಾನೂ ರಾಣಿ ಚನ್ನಮ್ಮ’ ಎಂಬ ಅಭಿಯಾನದಡಿ ಒಂದು ದಿನದ ರಾಷ್ಟ್ರೀಯ ಮಹಿಳಾ ಸಮಾವೇಶ ನಡೆಯಲಿದೆ.
‘ಸಮಾವೇಶಕ್ಕಾಗಿ ಕೋಟೆ ಆವರಣದೊಳಗೆ ಬೃಹತ್ ವೇದಿಕೆ ಸಿದ್ಧಗೊಂಡಿದೆ. ದೇಶದ ವಿವಿಧ ರಾಜ್ಯಗಳಿಂದ 2,000ಕ್ಕೂ ಹೆಚ್ಚು ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ’ ಎಂದು ಸಂಘಟಕರು ತಿಳಿಸಿದ್ದಾರೆ.
ಬೆಳಿಗ್ಗೆ 9ಕ್ಕೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ರಾಣಿ ಚನ್ನಮ್ಮ ವರ್ತುಲದಿಂದ ಕೋಟೆ ಆವರಣದವರೆಗೆ ಜ್ಯೋತಿ ಮೆರವಣಿಗೆ ನಡೆಯಲಿದೆ. ನಂತರ 10.30ಕ್ಕೆ ವಸ್ತು ಪ್ರದರ್ಶನ ಉದ್ಘಾಟನೆ ಮತ್ತು ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ವಂದನೆ ನಡೆಯಲಿದೆ. 11 ರಿಂದ 12.30 ಗಂಟೆಯವರೆಗೆ ಉಪನ್ಯಾಸ ಮಾಲಿಕೆ ನಡೆಯಲಿದೆ.
‘ಮಹಾರಾಷ್ಟ್ರದ ಮೇಘಾ ಪನ್ಸಾರೆ, ಆನಿ ರಾಜಾ, ಅಖಿಲ ಭಾರತ ದಲಿತ ಮಹಿಳಾ ಅಧಿಕಾರ ಮಂಚ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿರಾಮಿ ಜ್ಯೋತಿ, ಸಾಮಾಜಿಕ ಕಾರ್ಯಕರ್ತೆ ದೆಹಲಿಯ ಶಬ್ನಮ್ ಹಶ್ಮಿ, ಸಾಮಾಜಿಕ ಕಾರ್ಯಕರ್ತೆಯರಾದ ಲೀನಾ ಡಬಿರು, ರುತ್ ಮನೋರಮಾ, ತೆಲಂಗಾಣದ ಮೀರಾ ಸಂಘಮಿತ್ರ, ರಾಜಸ್ಥಾನದ ನಿಶಾ ಸಿದ್ದು, ಡಾ.ಎಚ್.ಎಸ್. ಅನುಪಮಾ, ಬಾನು ಮುಷ್ತಾಕ್, ಮಾಲತಿ ಪಟ್ಟಣಶೆಟ್ಟಿ, ಸಬಿಹಾ ಭೂಮಿಗೌಡ, ಮೀನಾಕ್ಷಿ ಬಾಲಿ, ಸಬಿತಾ ಬನ್ನಾಡಿ, ಅಖಿಲಾ ವಿದ್ಯಾಸಂದ್ರ, ಸುಶೀಲಾ, ಶೈಲಜಾ ಹಿರೇಮಠ ಶಾಂತಲಾ ದಾಮ್ಲೆ, ರೋಹಿಣಿ ಪಾಟೀಲ ಸಮಾವೇಶದಲ್ಲಿ ಭಾಗವಹಿಸುವರು’ ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.