ADVERTISEMENT

ಸೈನಿಕ ಶಾಲೆಯಲ್ಲಿ ಕರ್ನಾಟಕದ ಮಕ್ಕಳಿಗೆ ಶೇ 65ರಷ್ಟು ಮೀಸಲಾತಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 9:19 IST
Last Updated 17 ಜನವರಿ 2024, 9:19 IST
<div class="paragraphs"><p>ಸಿದ್ದರಾಮಯ್ಯ ಸೈನಿಕ ಶಾಲೆ ಉದ್ಘಾಟನೆ</p></div>

ಸಿದ್ದರಾಮಯ್ಯ ಸೈನಿಕ ಶಾಲೆ ಉದ್ಘಾಟನೆ

   

ಸಂಗೊಳ್ಳಿ (ಬೆಳಗಾವಿ ಜಿಲ್ಲೆ): ಸಂಗೊಳ್ಳಿಯಲ್ಲಿ ಇದೇ ವರ್ಷ ಪ್ರಾರಂಭಿಸಿದ ಕ್ರಾಂತಿವೀರ ಸಂಗೊಳ್ಳಿ‌ ರಾಯಣ್ಣ ಸೈನಿಕ‌ ಶಾಲೆಯಲ್ಲಿ ಕರ್ನಾಟಕದ ಮಕ್ಕಳಿಗೆ ಶೇ 65ರಷ್ಟು ಮೀಸಲಾತಿ‌ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಂಗೊಳ್ಳಿಯಲ್ಲಿ‌ ಬುಧವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ‌ನೀಡಿದ ಅವರು, ವಿಜಯಪುರ ಸೈನಿಕ‌ ಶಾಲೆಯಲ್ಲಿ‌ ಈಗಾಗಲೇ ಕನ್ನಡ‌ ನಾಡಿನ ಮಕ್ಕಳಿಗಾಗಿ ಶೇ 65ರಷ್ಟು ಮೀಸಲಾತಿ‌ ಇದೆ. ಅದೇ ಮಾದರಿಯನ್ನು ಇಲ್ಲಿಯೂ ಮುಂದುವರಿಸಲಾಗುವುದು ಎಂದರು.

ADVERTISEMENT

ತಾಯ್ನಾಡಿಗಾಗಿ ಬಲಿದಾನ ಮಾಡಿದ‌ ರಾಯಣ್ಣನ ಭೂಮಿಯಲ್ಲಿ ಸೈನಿಕ ಶಾಲೆ, ಶಿಲ್ಪವನ, ಸಮುದಾಯ‌ ಭವನ ಉದ್ಘಾಟಿಸಿದ್ದು ನನಗೆ ಹೆಮ್ಮೆ ತಂದಿದೆ ಎಂದರು.

ಮಹಾರಾಷ್ಟ್ರ ಸರ್ಕಾರ 865 ಹಳ್ಳಿಗಳಿಗೆ ಜನಾರೋಗ್ಯ ವಿಮೆ ಜಾರಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದೇ‌ನೆ. ಅವರು ಪರಿಶೀಲಿಸುತ್ತಾರೆ ಎಂದರು.

'ಸಿದ್ದರಾಮಯ್ಯ ಅವರು ಪೂರ್ಣಾವಧಿ ಮುಖ್ಯಮಂತ್ರಿ ‌ಅಗಿರುತ್ತಾರೆ' ಎಂಬ ಯತೀಂದ್ರ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅದನ್ನು ನಾನು ಅಥವಾ‌ ನನ್ನ ಮಗ ತೀರ್ಮಾನ ಮಾಡುವುದಿಲ್ಲ.‌ ಹೈಕಮಾಂಡ್ ನಿರ್ಧರಿಸುತ್ತದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.