ADVERTISEMENT

ಮಹಾನ್‌ ನಾಯಕರ ಆದರ್ಶ ಅಳವಡಿಸಿಕೊಳ್ಳಿ: ಎಚ್.ಎಸ್.ಬಿಸ್ವಾಗರ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 15:20 IST
Last Updated 8 ಜುಲೈ 2024, 15:20 IST
ಪರಮಾನಂದವಾಡಿ ಸಮೀಪದ ಯಲ್ಪಾರಟ್ಟಿಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳು
ಪರಮಾನಂದವಾಡಿ ಸಮೀಪದ ಯಲ್ಪಾರಟ್ಟಿಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳು   

ಪರಮಾನಂದವಾಡಿ: ‘ವಿದ್ಯಾರ್ಥಿಗಳು ಮಹಾನ್‌ ನಾಯಕರ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಹಾರೂಗೇರಿಯ ಬಿ.ಆರ್.ದರೂರ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಚ್.ಎಸ್.ಬಿಸ್ವಾಗರ ಹೇಳಿದರು.

ಸಮೀಪದ ಯಲ್ಪಾರಟ್ಟಿಯಲ್ಲಿ ಪರಮಾನಂದವಾಡಿಯ ಜೆ.ಪಿ.ಶಿರಗೂರಕರ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ಆಶ್ರಯದಲ್ಲಿ ಏಳು ದಿನ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ನಿರ್ದಿಷ್ಟವಾದ ಗುರಿ ಹೊಂದಬೇಕು. ಅದನ್ನು ಸಾಕಾರವಾಗಿಸಲು ನಿರಂತರವಾಗಿ ಶ್ರಮಿಸಿದರೆ ಯಶಸ್ಸು ಗಳಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸಿದ್ದಪ್ಪ ಗೊಂಧಳಿ ಉಪನ್ಯಾಸ ನೀಡಿದರು. ಪ್ರಾಚಾರ್ಯ ರಾಜು ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು. ರಮೇಶ ಒಡೆಯರ, ರಾಮಪ್ಪ ಬಂತಿ, ಮಲಕಾರಿ ದಳವಾಯಿ, ಲಕ್ಷ್ಮಣ ತೇರದಾಳ, ಗಿರೆಪ್ಪ ಖವಟಕೊಪ್ಪ, ಶಿವಾನಂದ ಚೌಗಲಾ, ಎನ್.ಬಿ.ಕುಸನಾಳೆ, ಎಚ್.ಎಸ್.ಕುರಣೆ, ಆರ್.ಎಚ್.ನಾಯಿಕ, ಎಸ್.ಎಂ.ಪಾಟೀಲ, ಎಂ.ಬಿ.ಬೆಕ್ಕೇರಿ ಇದ್ದರು. ಡಿ.ಎಂ.ದುರದುಂಡಿ ಸ್ವಾಗತಿಸಿದರು. ಕವಿತಾ ಘಟಕಾಂಬಳೆ ವಂದಿಸಿದರು. ಉಪಪ್ರಾಚಾರ್ಯ ಅಶೋಕ ಶಿರಹಟ್ಟಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.