ADVERTISEMENT

ಜನನ, ಮರಣ ನೋಂದಣಿ ಕಾಯ್ದೆತಿದ್ದುಪಡಿ ರದ್ದುಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 5:18 IST
Last Updated 26 ಜುಲೈ 2022, 5:18 IST
ಬೈಲಹೊಂಗಲದಲ್ಲಿ ವಕೀಲರು ತಹಶೀಲ್ದಾರ್ ಬಸವರಾಜ ನಾಗರಾಳ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು
ಬೈಲಹೊಂಗಲದಲ್ಲಿ ವಕೀಲರು ತಹಶೀಲ್ದಾರ್ ಬಸವರಾಜ ನಾಗರಾಳ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು   

ಬೈಲಹೊಂಗಲ: ಜನನ ಮತ್ತು ಮರಣ ನೋಂದಣಿ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದ ನ್ಯಾಯಾಂಗದ ವ್ಯಾಪ್ತಿಯನ್ನು ಬದಲಾವಣೆ ಮಾಡಿರುವುದನ್ನು ರದ್ದುಗೊಳಿಸಿ ಮೊದಲಿನಂತೆ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ವಕೀಲರ ಸಂಘದಿಂದ ಪ್ರತಿಭಟನೆ ನಡೆಯಿತು. ತಹಶೀಲ್ದಾರ್ ಬಸವರಾಜ ನಾಗರಾಳ ಅವರಿಗೆ ವಕೀಲರು ಸೋಮವಾರ ಮನವಿ ಸಲ್ಲಿಸಿದರು.

ವಕೀಲರ ಸಂಘದ ಉಪಾಧ್ಯಕ್ಷ ಎಂ.ಆರ್. ಸೋಮಣ್ಣವರ, ವಕೀಲರ ಸಂಘದ ಕಾರ್ಯದರ್ಶಿ ಸಂತೋಷ ಭಾವಿ ಮಾತನಾಡಿ, ‘ಜನನ ಮತ್ತು ಮರಣ ನೋಂದಣಿ ಕಾಯ್ದೆಗೆ ಸಂಬಂಧಿಸಿದ ವಿಷಯಗಳು ಈ ಹಿಂದೆ ಜೆ.ಎಂ.ಎಫ್.ಸಿ. ನ್ಯಾಯಾಲಯದ ವ್ಯಾಪ್ತಿಗೆ ಇತ್ತು. ಈಗ ಅದಕ್ಕೆ ಬದಲಾಗಿ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಪ್ರಕರಣಗಳ ಇತ್ಯರ್ಥಕ್ಕೆ ಅಧಿಕಾರ ನೀಡಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಇದರಿಂದ ಪಕ್ಷಗಾರರಿಗೆ ಅನ್ಯಾಯವಾಗುತ್ತದೆ. ಕೂಡಲೇ ಕರ್ನಾಟಕ ಜನನ, ಮರಣ ನೋಂದಣಿ ತಿದ್ದುಪಡಿ‌ ನಿಯಮವನ್ನು ರದ್ದುಗೊಳಿಸ ಈ ಮೊದಲಿನಂತೆ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಮುಂದುವರಿಸಬೇಕು ಎಂದು ಮನವಿ ಮಾಡಿದರು.

ವಕೀಲರಾದ ಎಂ.ಎಂ.ಅಲ್ಲಯ್ಯನವರ, ಸಿ.ಎಸ್.ಚಿಕ್ಕನಗೌಡರ, ಎಂ.ಎಂ.ಸೋಪಿನ, ಡಿ.ವೈ.ಗರಗದ, ಎಸ್.ಜಿ.ಚಿಕ್ಕಮಠ, ಬಸವರಾಜ ದೋತ್ರದ, ಎಸ್.ಬಿ.ಬಡಿಗೇರ, ಎಫ್.ಎಫ್.ಕುರುಬರ, ಅಶ್ವಿನಿ ಪೀರಗೋಜಿ, ಬಿ.ಎನ್.ಲಕ್ಕನಗೌಡರ, ಮಹಮ್ಮದಶಪಿ ಅಂಕಲಗಿ, ಸಿ.ಎಚ್.ವನಜಾರಿ, ವಿ.ಸಿ. ಸಂಗೊಳ್ಳಿ, ಎಸ್.ಎಚ್.ಮಾಳಗಿ, ಪೂಜಾ ಡುಮ್ಮಾಳೆ, ಗಿರಿಜಾ ಆಲದಕಟ್ಟೆ, ಪೂರ್ಣಿಮಾ ಚೌಬಾರಿ, ಬಿ.ಆರ್.ಹರಿದಾಸ, ವಿಜಯಲಕ್ಷ್ಮಿ ಹಿರೇಮಠ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.