ಯಮಕನಮರಡಿ: ರೈತರಿಗೆ ಕಡಿಮೆ ಖಚ್ಚಿನಲ್ಲಿ ಡ್ರೋನ್ ಮೂಲಕ ಔಷಧ ಸಿಂಪಡಣೆ ಮತ್ತು ಸರ್ಕಾರ ರಿಯಾಯಿತಿ ದರದಲ್ಲಿ ರೈತರಿಗೆ ಅನುಕೂಲವಾಗುವಂತಹ ಸಲಕರಣೆಗಳನ್ನು ನೀಡುತ್ತಿದ್ದು, ಅವರ ಆರ್ಥಿಕಮಟ್ಟ ಸುಧಾರಣೆಗೆ ಅನಕೂಲವಾಗಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸಮೀಪದ ಹತ್ತರಗಿ ಸುಕ್ಷೇತ್ರದ ಕಾರಿಮಠದಲ್ಲಿ ಶನಿವಾರ ನಡೆದ ಹುಕ್ಕೇರಿ ಕೃಷಿ ಇಲಾಖೆಯ ಸಹಯೋಗದಲ್ಲಿ ಯಮಕನಮರಡಿ ಹೊಬಳಿ ಮಟ್ಟದ 155 ಫಲಾನುಭವಿಗಳಿಗೆ ಕೃಷಿ ಇಲಾಖೆಯಿಂದ ವಿವಿಧ ಯೋಜನೆಗಳ ಸವಲತ್ತು ವಿತರಣಾ ಕಾರ್ಯಕ್ರಮ ಹಾಗೂ ರೈತರ ಹೊಲದಲ್ಲಿ ಸೋಯಾಬಿನ್, ಅವರೆ ಬೆಳೆಗೆ ಡ್ರೋನ್ ಮೂಲಕ ಔಷಧ ಸಿಂಪಡಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
35 ತುಂತುರ ನೀರಾವರಿ ಪೈಪ್, 100 ತಾಡಪತ್ರಿ, 2 ರಾಶಿ ಮಶೀನ, 4 ಪವರ್ ಟೇಲರ್, 4 ನೇಗಿಲು, 4 ರೋಟರ್ ಯಂತ್ರ, 3 ಬೆಳೆ ಹೊಡೆಯುವ ಪೆಟ್ರೋಲ್ ಪಂಪ್ ಸೇರಿ ಒಟ್ಟು 155 ರೈತರಿಗೆ ₹75 ಲಕ್ಷ ಮೊತ್ತದ ಸಲಕರಣೆಗಳನ್ನು ರಿಯಾಯಿತಿ ನೀಡಲಾಗಿದೆ ಎಂದರು.
ಹತ್ತರಗಿ ಕಾರಿಮಠದ ಸುಕ್ಷೇತ್ರದ ಗುರುಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬೆಳಗಾವಿ ಜಂಟಿ ಕೃಷಿ ನಿರ್ದೇಶಕ ಶಿವಗೌಡಾ ಪಾಟೀಲ, ಚಿಕ್ಕೋಡಿ ಉಪನಿರ್ದೇಶಕ ಎಚ್.ಡಿ.ಕೋಳೇಕರ, ಹುಕ್ಕೇರಿ ಸಹಾಯಕ ಕೃಷಿ ನಿದರ್ೇಶಕ ಆರ್.ಬಿ.ನಾಯಕರ, ಬೆಳಗಾವಿ ಕೃಷಿ ಸಹಾತಯಕ ನಿರ್ದೇಶಕ ಎಸ್,ಬಿ.ಕೊಂಡವಾಡ ಯಮಕನಮರಡಿ ಗ್ರಾ.ಪಂ ಅಧ್ಯಕ್ಷೆ ಆಸ್ಮಾ ಫಣಿಬಂದ, ರೈತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.