ADVERTISEMENT

ಅಂಬಾ ಭವಾನಿ ನವರಾತ್ರಿ ಉತ್ಸವ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 16:27 IST
Last Updated 2 ಅಕ್ಟೋಬರ್ 2024, 16:27 IST
ಅಂಬಾ ಭವಾನಿ
ಅಂಬಾ ಭವಾನಿ   

ಮುನವಳ್ಳಿ: ಪಟ್ಟಣದ ಅಂಬಾ ಭವಾನಿ ದೇವಸ್ಥಾನದಲ್ಲಿ 16ನೇ ನವರಾತ್ರಿ ಉತ್ಸವ ಅ. 3 ರಿಂದ ಅ. 12 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸೋಮಶೇಖರ ಮಠದ ಮುರುಘೇಂದ್ರ ಶ್ರೀ, ನರಗುಂದದ ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯ ಶ್ರೀ ನೇತೃತ್ವದಲ್ಲಿ ನಡೆಯಲಿದೆ.

ಅ. 3ರಂದು ಘಟಸ್ಥಾಪನೆ, ಶ್ರೀದೇವಿ ಪುರಾಣ ಆರಂಭ ನಡೆಯಲಿದೆ. ಪ್ರತಿ ದಿನ ಸಂಜೆ 8ರಿಂದ 9ರವರೆಗೆ ಯಕ್ಕುಂಡಿಯ ಸಂಗಯ್ಯ ಹಿರೇಮಠ ಹಾಗೂ ಶ್ರೀನಿವಾಸ ಕುಲಕರ್ಣಿ ಅವರಿಂದ ಶ್ರೀ ದೇವಿ ಪುರಾಣ ನಡೆಯಲಿದೆ.

ಅ. 4 ಸಂಜೆ 6.30ಕ್ಕೆ ಬನಶಂಕರಿದೇವಿ ಮಹಿಳಾ ಮಂಡಳದವರಿಂದ ಭಜನಾ ಕಾರ್ಯಕ್ರಮ, ಅ. 5ರಂದು ಸಂಜೆ 6.30ಕ್ಕೆ ಶಾರದಾ ಭಜನಾ ಮಂಡಳಿಯಿಂದ ಭಜನೆ, 6ರಂದು ಸಂಜೆ 4ಕ್ಕೆ ಜೈಂಟ್ಸ್ ಗ್ರೂಪ್‌ ಆಫ್ ರಾಣಿ ಚನ್ನಮ್ಮ ಸಹೇಲಿ ಗ್ರುಪ್‌ನಿಂದ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಸಂಜೆ 7ಕ್ಕೆ ಜಯಸುಧಾ ಫೌಂಡೇಶನ್‌ನಿಂದ ಚಿಕ್ಕಮ್ಕಳಿಗಾಗಿ ದೇವಿ ವೇಷಭೂಷಣ ಸ್ಪರ್ಧೆ, ಅ. 7ರಂದು ರಾತ್ರಿ 9.30ಕ್ಕೆ ಸತೀಶ ರೇಣಕೆ, ಅಜರೇಕರ ಸಂತ ಮಂಡಳಿಯಿಂದ ಭಜನೆ ಹಾಗೂ ಕೀರ್ತನೆ, ಅ. 8 ರಂದು ಬೆಳಿಗ್ಗೆ 9ರಿಂದ ಕುಂಕುಮಾರ್ಚನೆ ನಡೆಯಲಿದೆ.

ADVERTISEMENT

ರಾತ್ರಿ 10ರಿಂದ ಸಿದ್ದಪ್ಪ ಶಿವಪ್ಪ ತುಳಜಣ್ಣವರ ಹಾಗೂ ಸಂಗಡಿಗರಿಂದ ಭಜನೆ ನಡೆಯಲಿದೆ. ಅ. 9 ರಂದು ರಾತ್ರಿ 10ಕ್ಕೆ ಎಸ್.ಬಿ. ಹಿರಲಿಂಗಣ್ಣವರ ಹಾಗೂ ವೈ.ಎಫ್. ಶ್ಯಾನಭೋಗ ಅವರಿಂದ ಹಾಸ್ಯ ಸಂಜೆ, ಹವ್ಯಾಸಿ ಕಲಾ ಬಳಗದಿಂದ ಗಾನಸುಧೆ ಕಾರ್ಯಕ್ರಮ ನಡೆಯಲಿದೆ.

10ರಂದು ರಾತ್ರಿ 10ಕ್ಕೆ ಅಂಬಾಭವಾನಿಯ ಗೊಂದಲೋತ್ಸವ, 11 ರಂದು ಬೆಳಿಗ್ಗೆ ಮಹಿಳೆಯರಿಗೆ ಉಡಿ ತುಂಬುವದು, 11ಕ್ಕೆ ಹರ-ಗುರು-ಚರ ಮೂರ್ತಿಗಳ ಸಮ್ಮುಖದಲ್ಲಿ ಶ್ರೀದೇವಿ ಪುರಾಣ ಮಂಗಲೋತ್ಸವ ಹಾಗೂ ಮಹಾಪ್ರಸಾದ ನಡೆಯಲಿದೆ. 12 ರಂದು ಸಂಜೆ ಸೀಮೋಲ್ಲಂಘನದ ಜೊತೆಗೆ ಅಂಬಾ ಭವಾನಿ ಪಲ್ಲಕ್ಕಿ ಉತ್ಸವದೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ ಎಂದು ದೇವಸ್ಥಾನದ ಕಮಿಟಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.