ADVERTISEMENT

ಬೆಳಗಾವಿ: ಹೂಳೆತ್ತಿದ ಕೆರೆಗೆ ಬಾಗಿನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 15:46 IST
Last Updated 12 ಮಾರ್ಚ್ 2024, 15:46 IST
ಬೆಳಗಾವಿ ತಾಲ್ಲೂಕಿನ ಹೊನಗಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಾಸರವಾಡಿಯಲ್ಲಿ ಬಾಗಿನ ಅರ್ಪಿಸಲಾಯಿತು
ಬೆಳಗಾವಿ ತಾಲ್ಲೂಕಿನ ಹೊನಗಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಾಸರವಾಡಿಯಲ್ಲಿ ಬಾಗಿನ ಅರ್ಪಿಸಲಾಯಿತು   

ಬೆಳಗಾವಿ: ‘ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕಿದೆ. ಕೆರೆಗಳೇ ಇಲ್ಲದಿದ್ದರೆ ಜೀವಸಂಕುಲ ನಾಶವಾಗಲಿದೆ. ಕೆರೆಗಳ ನಿರ್ಮಾಣದಿಂದ ಜೀವಸಂಕುಲಕ್ಕೆ ಆಸರೆಯಾಗಲಿದೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಘಟಕದ ನಿರ್ದೇಶಕ ಸತೀಶ ನಾಯಕ ಹೇಳಿದರು.

ತಾಲ್ಲೂಕಿನ ಹೊನಗಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಾಸರವಾಡಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರದಿಂದ ಹೂಳೆತ್ತಿದ ಕೆರೆಗೆ ಬಾಗಿನ ಅರ್ಪಣೆ ಹಾಗೂ ನಿರ್ವಹಣೆಗಾಗಿ ಪಂಚಾಯ್ತಿಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೀಜಾಬಾಯಿ ದುಡುಮ್, ಕೆರೆ ಸಮಿತಿ ಅಧ್ಯಕ್ಷ ನಾಗರಾಜ ಪಾಟೀಲ, ನಾಗರಾಜ್ ಹದ್ಲಿ, ದೀಪಾ ಪಾಟೀಲ,  ಆನಂದ ಪಾಟೀಲ, ಕಿರಣ ಪಾಟೀಲ, ಬಸು ನಾಯಕ್, ವಿಜಯ ಸುತಾರ, ಸಂತೋಷ ಪಾಟೀಲ, ಮಹಾಬಳೇಶ್ವರ ಪಟಗಾರ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.