ADVERTISEMENT

ಮುನವಳ್ಳಿ: ಪಂಢರಪುರಕ್ಕೆ ಆಷಾಡಿವಾರಿ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 15:50 IST
Last Updated 17 ಜೂನ್ 2024, 15:50 IST
ಪಾಡುರಂಗ–ರುಕ್ಮೀಣಿ  
ಪಾಡುರಂಗ–ರುಕ್ಮೀಣಿ     

ಮುನವಳ್ಳಿ: ಪಟ್ಟಣದ ವಿಠ್ಠಲ ಮಂದಿರದಿಂದ ಜೂನ್‌ 26ರಂದು 30ನೇ ಆಷಾಡಿವಾರಿ ಪಾದಯಾತ್ರೆ ಪ್ರಾರಂಭವಾಗಲಿದೆ.

ಸುಕ್ಷೇತ್ರ ಆಳಂದಿಯವರೆಗೆ ವಾಹನಗಳ ಮೂಲಕ ಹೊರಟು ಜೂನ್‌ 30ಕ್ಕೆ ಆಳಂದಿಯಿಂದ ಪಾದಯಾತ್ರೆ ಮೂಲಕ ಪಂಢರಪುರವನ್ನು ಜುಲೈ 17 ರಂದು ತಲುಪಲಿದೆ. ಜುಲೈ 17 ರಂದು ಆಷಾಡ ಏಕಾದಶಿ ಮುಗಿಸಿ ಜುಲೈ 18 ರಂದು ಮರಳಿ ತಮ್ಮ ತಮ್ಮ ಗ್ರಾಮಗಳಿಗೆ ವಾಹನ ಮೂಲಕ ಬೆಲಾಗುವುದು.

ಸಂಪ್ರದಾಯದಂತೆ ಪ್ರತಿವರ್ಷದಂತೆ ಈ ವರ್ಷವೂ ಜ್ಞಾನೇಶ್ವರ ಮಹಾರಾಜರ ಆಷಾಡಿವಾರಿ ಪಾಲಕಿ ಮಹೋತ್ಸವ ಜರುಗಲಿದೆ. ತಾಳ, ಮೇಳ, ತಮ್ಮ ಸಲಕರಣೆ ಜೊತೆಗೆ ಯಾತ್ರೆಯಲ್ಲಿ ಭಾಗವಹಿಸುವವರಿಗೆ ಪ್ರತಿಗ್ರಾಮಗಳಲ್ಲಿ ಅಲ್ಪೋಪಹಾರ, ಊಟ, ರಾತ್ರಿ ವಾಸ್ತವ್ಯದ ವ್ಯವಸ್ಥೆ ಇರುತ್ತದೆ ಮತ್ತು ಪ್ರಯಾಣದ ಉದ್ದಕ್ಕೂ ಕೀರ್ತನೆ, ಹರಿನಾಮ ಸಂಕೀರ್ತನೆ ಹಾಗೂ ನೀತಿ ಬೋಧಕ ಕಥೆ ವಿವರಣೆ ಜರುಗುವುದು. ಒಟ್ಟು 23 ದಿನದ ಪಾದಯಾತ್ರೆ ಇರುತ್ತದೆ. ಪಾದಯಾತ್ರೆ ಮಾಡಲು ಇಚ್ಛಿಸುವರು ಜೂನ್ 25 ರೊಳಗಾಗಿ ಅಂಗದ ಅರವಿಂದ ರೇಣಕೆ (7204780158) ಅವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.