ADVERTISEMENT

1500 ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 14:48 IST
Last Updated 24 ಜುಲೈ 2024, 14:48 IST
ಚಿಕ್ಕೋಡಿ ಪಟ್ಟಣದ ಪರಟಿ ನಾಗಲಿಂಗೇಶ್ವರ ಸಭಾಭವನದಲ್ಲಿ ಶಾಸಕ ಗಣೇಶ ಹುಕ್ಕೇರಿ ಅವರ ಜನ್ಮ ದಿನದ ಅಂಗವಾಗಿ ಅಭಿಮಾನಿ ಬಳಗದ ವತಿಯಿಂದ ವಿದ್ಯಾರ್ಥಿಗಳಿಗೆ ಕಾಲೇಜು ಬ್ಯಾಗ್ ವಿತರಣೆ ಮಾಡಲಾಯಿತು
ಚಿಕ್ಕೋಡಿ ಪಟ್ಟಣದ ಪರಟಿ ನಾಗಲಿಂಗೇಶ್ವರ ಸಭಾಭವನದಲ್ಲಿ ಶಾಸಕ ಗಣೇಶ ಹುಕ್ಕೇರಿ ಅವರ ಜನ್ಮ ದಿನದ ಅಂಗವಾಗಿ ಅಭಿಮಾನಿ ಬಳಗದ ವತಿಯಿಂದ ವಿದ್ಯಾರ್ಥಿಗಳಿಗೆ ಕಾಲೇಜು ಬ್ಯಾಗ್ ವಿತರಣೆ ಮಾಡಲಾಯಿತು   

ಚಿಕ್ಕೋಡಿ: ‘ಚಿಕ್ಕೋಡಿ–ಸದಲಗಾ ಶಾಸಕ ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು ಚಿಕ್ಕೋಡಿ ಕ್ಷೇತ್ರದಲ್ಲಿ ಸದಾ ಕಾಲವೂ ಜನರ ಸಮಸ್ಯೆಗೆ ಸ್ಪಂದಿಸುತ್ತ ಜನರ ಹೃದಯದಲ್ಲಿ ನೆಲೆ ನಿಂತಿದ್ದಾರೆ. ಕ್ಷೇತ್ರದಲ್ಲಿ ಶಿಕ್ಷಣ, ನೀರಾವರಿ, ಆರೋಗ್ಯ, ಮೂಲಸೌಕರ್ಯ ಒದಗಿಸಲು ಆದ್ಯತೆ ನೀಡಿದ್ದು ಕ್ಷೇತ್ರದ ಜನರ ಹೆಮ್ಮೆಯಾಗಿದೆ’ ಎಂದು ಕಾಂಗ್ರೆಸ್ ಮುಖಂಡ ರಾಮಾ ಮಾನೆ ಹೇಳಿದರು.

ಪಟ್ಟಣದ ಪರಟಿ ನಾಗಲಿಂಗೇಶ್ವರ ಸಭಾಭವನದಲ್ಲಿ ಬುಧವಾರ ದು ಶಾಸಕ ಗಣೇಶ ಹುಕ್ಕೇರಿ ಅವರ 46ನೇ ಜನ್ಮದಿನಾಚರಣೆ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

‘4 ದಶಕಗಳಿಂದ ಪ್ರಕಾಶ ಹುಕ್ಕೇರಿ ಹಾಗೂ 2 ದಶಕಗಳಿಂದ ಗಣೇಶ ಹುಕ್ಕೇರಿ ಅವರು ಕ್ಷೇತ್ರದ ಪ್ರತಿ ಗ್ರಾಮಗಳಲ್ಲೂ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಜನಾನುರಾಗಿಯಾಗಿದ್ದಾರೆ’ ಎಂದರು.

ADVERTISEMENT

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಿಲ ಪಾಟೀಲ, ‘ಇವರಿಬ್ಬರೂ ಕ್ಷೇತ್ರದ ಎರಡು ಕಣ್ಣುಗಳು ಇದ್ದಂತೆ. ಇವರಿಂದ ಕ್ಷೇತ್ರದ ಜನರ ನಿರೀಕ್ಷೆ ಸಾಕಷ್ಟು ಇವೆ’ ಎಂದರು.

5 ಸರ್ಕಾರಿ ಪಿಯು ಕಾಲೇಜಿನ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು.

ಶಾಸಕ ಗಣೇಶ ಹುಕ್ಕೇರಿ ಅವರು ವಿಧಾನಸಭೆ ಅಧಿವೇಶನದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇರುವುದರಿಂದ ಅವರ ಸಂದೇಶವನ್ನು ಯುವ ನಾಯಕ ಕಿಶೋರಕುಮಾರ ಪವಾರ ಓದಿ ಹೇಳಿದರು.

ಮುಖಂಡರಾದ ಬಾಳಸಾಹೇಬ ಪಾಟೀಲ, ಪ್ರಭಾಕರ ಐ. ಕೋರೆ, ವರ್ಧಮಾನ ಸದಲಗೆ, ರವಿ ಮಾಳಿ, ಶ್ಯಾಮ ರೇವಡೆ, ಪಾಂಡುರಂಗ ಮಾನೆ, ಅನಿಲ ಮಾನೆ, ರಾಜೇಂದ್ರ ಕರಾಳೆ, ಉಮೇಶ ಸಾತ್ವಾರ, ರವಿ ಹಂಪನ್ನವರ, ಪಾಂಡು ಕೋಳಿ, ಪೋಪಟ ನರವಾಡೆ, ಸುರೇಶ ಚೌಗಲಾ, ಪರಶುರಾಮ ಕಾಳೆ, ಪೋಪಟ ಸಪ್ತಸಾಗರೆ, ಅನಿಲ ವಾಳಕೆ, ಶಿವಕುಮಾರ ಹಂಜಿ, ನರೇಂದ್ರ ನೇರ್ಲೆಕರ, ಇರ್ಫಾನ ಬೇಪಾರಿ, ಚಂದ್ರಕಾಂತ ಹುಕ್ಕೇರಿ, ಪುಂಡಲೀಕ ಖೋತ, ಸತೀಶ ಕುಲಕರ್ಣಿ, ಗುಲಾಬಹುಸೇನ ಬಾಗವಾನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.