ಗೋಕಾಕ: ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಲುವಾಗಿ ಹಿಡಕಲ್ ಜಲಾಶಯದಿಂದ ಜಿಎಲ್‌ಬಿಸಿ, ಜಿಆರ್‌ಬಿಸಿ ಮತ್ತು ಸಿಬಿಸಿ ಕಾಲುವೆಗಳಿಗೆ ಕೂಡಲೇ ನೀರನ್ನು ಬಿಡುಗಡೆ ಮಾಡಬೇಕು ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಹಿಡಕಲ್ ಜಲಾಶಯದಲ್ಲಿ 5.93 ಟಿಎಂಸಿ ನೀರು ಸಂಗ್ರಹವಿದ್ದು, ಜನ ಹಾಗೂ ಜಾನುವಾರುಗಳಿಗಾಗಿ ಮೇ 22ರಿಂದ ಏಳು ನೀರು ಹರಿಸಬೇಕು ಎಂದು ಕೋರಿದ್ದಾರೆ.
ಮೂಡಲಗಿ, ಗೋಕಾಕ, ಹುಕ್ಕೇರಿ, ಚಿಕ್ಕೋಡಿ, ರಾಯಭಾಗ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆ ನೀಗಿಸಲು ಹಿಡಕಲ್ ಜಲಾಶಯದಿಂದ ಜಿಎಲ್‌ಬಿಸಿಗೆ 2 ಸಾವಿರ ಕ್ಯುಸೆಕ್, ಜಿಆರ್‌ಬಿಸಿಗೆ 2 ಸಾವಿರ ಕ್ಯುಸೆಕ್ ಮತ್ತು ಸಿಬಿಸಿಗೆ 500 ಕ್ಯುಸೆಕ್ ನೀರನ್ನು ನಿತ್ಯ ಹರಿಸುವಂತೆ ಒತ್ತಾಯಿಸಿದ್ದಾರೆ.
‘ಒಟ್ಟು 2.93 ಟಿಎಂಸಿ ನೀರನ್ನು ತುರ್ತಾಗಿ ಕಾಲುವೆಗಳಿಗೆ ಹರಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.