ADVERTISEMENT

ಅಧಿಕಾರಿಗಳ ಭರವಸೆ: ಧರಣಿ ಅಂತ್ಯ.

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 14:09 IST
Last Updated 3 ಜುಲೈ 2024, 14:09 IST
ರಾಮದುರ್ಗದ ತಾಲ್ಲೂಕು ಪಂಚಾಯ್ತಿ ಮುಂಭಾಗದಲ್ಲಿ ಧರಣಿ ನಡೆಸಿದವರಿಗೆ ತಾಲ್ಲೂಕು ಪಂಚಾಯ್ತಿ ಇಒ ಪ್ರವೀಣಕುಮಾರ ಸಾಲಿ ಅವರು ಭರವಸೆಯ ಪತ್ರ ನೀಡುವ ಮೂಲಕ ಧರಣಿಗೆ ತೆರೆ ಎಳೆದರು
ರಾಮದುರ್ಗದ ತಾಲ್ಲೂಕು ಪಂಚಾಯ್ತಿ ಮುಂಭಾಗದಲ್ಲಿ ಧರಣಿ ನಡೆಸಿದವರಿಗೆ ತಾಲ್ಲೂಕು ಪಂಚಾಯ್ತಿ ಇಒ ಪ್ರವೀಣಕುಮಾರ ಸಾಲಿ ಅವರು ಭರವಸೆಯ ಪತ್ರ ನೀಡುವ ಮೂಲಕ ಧರಣಿಗೆ ತೆರೆ ಎಳೆದರು   

ರಾಮದುರ್ಗ: ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಹಣವನ್ನು ಸಂಬಂಧಿಸಿದ ಅಧಿಕಾರಿಗಳಿಂದ ಸರ್ಕಾರಕ್ಕೆ ಭರಿಸುವ ಭರವಸೆಯನ್ನು ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳು ನೀಡಿದ ಹಿನ್ನೆಲೆಯಲ್ಲಿ ಅಹೋರಾತ್ರಿ ಹಮ್ಮಿಕೊಂಡಿದ್ದ ಧರಣಿ ಅಂತ್ಯಗೊಂಡಿತು.

ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ ನೇತೃತ್ವದಲ್ಲಿ ತಾಲ್ಲೂಕು ಪಂಚಾಯ್ತಿ ಕಾರ್ಯಾಲಯದ ಮುಂಭಾಗದಲ್ಲಿ ನಡೆದ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಧರಣಿ ನಿರತರಿಗೆ ಎಳೆ ನೀರು ನೀಡುವ ಮೂಲಕ ಹಿಂಪಡೆಯುವಂತೆ ಮಾಡಿದರು.

ತಾಲ್ಲೂಕಿನ ಮುದೇನೂರ ಹಾಗೂ ಓಬಳಾಪೂರ ಗ್ರಾಮ ಪಂಚಾಯ್ತಿಯಲ್ಲಿ ನರೇಗಾ ಅವ್ಯವಹಾರ ನಡೆಸಿದ ಆಯಾ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು ಎಂದು ಶ್ರೀನಿವಾಸಗೌಡ ಪಟ್ಟು ಹಿಡಿದಿದ್ದರು. ತಾಲ್ಲೂಕಿನ 37 ಗ್ರಾಮ ಪಂಚಾಯಿತಿಯ ಲೆಕ್ಕಪರಿಶೋಧನಾ ವರದಿ ಪರಿಗಣಿಸಿ 6 ತಿಂಗಳೊಳಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಪ್ರತಿಭಟನಾ ನಿರತರೊಂದಿಗೆ ತಾಲ್ಲೂಕು ಪಂಚಾಯ್ತಿ ಇಒ ಪ್ರವೀಣಕುಮಾರ ಸಾಲಿ ಚರ್ಚೆ ನಡೆಸಿದರು. ತಪ್ಪಿತಸ್ಥ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಆಸ್ತಿಯ ಮೇಲೆ ಬೋಜಾ ಹೇರಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿ ಅಂತ್ಯಗೊಂಡಿದೆ.

ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ರಾಮದುರ್ಗ, ಕಾಳಪ್ಪ ಕಮ್ಮಾರ, ನಿಂಗನಗೌಡ ಸಂಗನಗೌಡ್ರ, ಸುಬ್ರಾಯಪ್ಪ ಪೂಜೇರ, ಮಲ್ಲಪ್ಪ ಮದರಖಂಡಿ, ಶಿವಪ್ಪ ಯಂಡಿಗೇರಿ, ಶಂಕರಪ್ಪ ಅಂಗಡಿ, ಮಹಾದೇವ ತ್ಯಾಟಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.