ADVERTISEMENT

ಬಕ್ರೀದ್‌: ₹2.30 ಲಕ್ಷಕ್ಕೆ ಎರಡು ಮೇಕೆ ಮಾರಾಟ

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 15:24 IST
Last Updated 15 ಜೂನ್ 2024, 15:24 IST
<div class="paragraphs"><p>ರಾಯಬಾಗ ತಾಲ್ಲೂಕಿನ ಸುಟ್ಟಟ್ಟಿಯಲ್ಲಿ ರೈತ ಮಹೇಶ ಖೋತ ₹1.20 ಲಕ್ಷಕ್ಕೆ ಮಾರಾಟ ಮಾಡಿದ ಮೇಕೆ</p></div>

ರಾಯಬಾಗ ತಾಲ್ಲೂಕಿನ ಸುಟ್ಟಟ್ಟಿಯಲ್ಲಿ ರೈತ ಮಹೇಶ ಖೋತ ₹1.20 ಲಕ್ಷಕ್ಕೆ ಮಾರಾಟ ಮಾಡಿದ ಮೇಕೆ

   

ರಾಯಬಾಗ(ಬೆಳಗಾವಿ ಜಿಲ್ಲೆ): ಬಕ್ರೀದ್‌ ಹಿನ್ನೆಲೆಯಲ್ಲಿ ತಾಲ್ಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ರೈತ ಮಹೇಶ ಖೋತ ಅವರಿಗೆ ಸೇರಿದ ಎರಡು ಮೇಕೆಗಳು ಒಟ್ಟು ₹2.30 ಲಕ್ಷಕ್ಕೆ ಮಾರಾಟವಾಗಿವೆ.

‘ಸಾಮಾನ್ಯವಾಗಿ ಮೇಕೆ ದರ ₹10 ಸಾವಿರ ದಿಂದ ₹25 ಸಾವಿರ ಇರುತ್ತದೆ. ಆದರೆ ನನ್ನ ಎರಡೂ ಮೇಕೆಗಳು ಕ್ರಮವಾಗಿ ₹1.20 ಲಕ್ಷ ಮತ್ತು ₹1.10 ಲಕ್ಷಕ್ಕೆ ಮಾರಾಟವಾಗಿವೆ. ಮಹಾರಾಷ್ಟ್ರದ ಕೊಲ್ಹಾಪುರ ಮತ್ತು ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾದ ಗ್ರಾಹಕರು ಖರೀದಿಸಿದರು’ ಎಂದು ಮಹೇಶ ಖೋತ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ನಮ್ಮದು ಅವಿಭಕ್ತ ಕುಟುಂಬ. 25 ಹೆಣ್ಣು ಮತ್ತು 12 ಗಂಡು ಮೇಕೆಗಳಿವೆ. ಈದ್‌ ಉಲ್‌ ಫಿತ್ರ್, ಬಕ್ರೀದ್ ಮತ್ತಿತರ ಹಬ್ಬಗಳ ಸಂದರ್ಭಗಳಲ್ಲಿ ಮಾರಲು ಮೇಕೆಗಳನ್ನು ಸಾಕುತ್ತೇವೆ’ ಎಂದರು.

‘ರಾಯಬಾಗ ತಾಲ್ಲೂಕಿನ ಮೇಕೆಗಳಿಗೆ ಹೆಚ್ಚು ಬೇಡಿಕೆಯಿದೆ. ಬಕ್ರೀದ್ ಹಿನ್ನೆಲೆಯಲ್ಲಿ ದುಬಾರಿ ಬೆಲೆ ಕೊಟ್ಟು ಗ್ರಾಹಕರು ಖರೀದಿಸುತ್ತಾರೆ’ ಎಂದು ಪಶು ವೈದ್ಯಾಧಿಕಾರಿ ಡಾ.ಪ್ರದೀಪ ಮೊಳವಾಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.