ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಶಿಶು ಮಾರಾಟ ಹಾಗೂ ಭ್ರೂಣಹತ್ಯೆ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಆರೋಪಿ, ನಕಲಿ ವೈದ್ಯ ಅಬ್ದುಲ್ ಗಫಾರ ಲಾಡಖಾನ್ ಈಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಪಟ್ಟಣಕ್ಕೆ ಬಂದ ಆರೋಪಿಯನ್ನು ಅವರ ಅಭಿಮಾನಿಗಳು ಹೂ ಹಾರ ಹಾಕಿ, ಪುಷ್ಪಮಳೆಗರೆದು ಸ್ವಾಗತಿಸಿದರು. ಈ ವಿಡಿಯೊಗಳನ್ನು ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
‘ಕಿಂಗ್ ಈಸ್ ಬ್ಯಾಗ್’ ಎಂಬ ಅಡಿ ಬರಹ ಬರೆದು ಚಲನಚಿತ್ರದ ಹಾಡನ್ನು ಹಾಕಿದ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.
ಬೆಳಗಾವಿ ಪೊಲೀಸರಿಂದ ಬಂಧಿತನಾದ ಮೇಲೆ ಚನ್ನಮ್ಮನ ಕಿತ್ತೂರು ಪೊಲೀಸ್ ಠಾಣೆಯಲ್ಲೂ ಆರೋಪಿ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ತೀವ್ರ ತಪಾಸಣೆ ಮಾಡಿದಾಗ ವೈದ್ಯ ಕೃಷಿ ಮಾಡಲು ಗುತ್ತಿಗೆ ಹಿಡಿದ ಜಮೀನಿನಲ್ಲಿ ಹೂತಿದ್ದ ಮೂರು ಭ್ರೂಣಗಳು ಪತ್ತೆಯಾಗಿದ್ದವು.
ನರ್ಸಿಂಗ್ ಕೆಲಸ ಮಾಡುತ್ತಿದ್ದ ಮಹಿಳೆಯ ಸಹಾಯದಿಂದ 30 ದಿನಗಳ ಶಿಶುವನ್ನು ₹1.40 ಲಕ್ಷಕ್ಕೆ ಮಾರಾಟ ಮಾಡಲು ಯತ್ನಿಸಿದ್ದರು. ಶಿಶುವನ್ನು ಬೆಳಗಾವಿಗೆ ಕರೆತರುವಾಗ ರಕ್ಷಿಸಲಾಗಿತ್ತು. ಕೆಲವು ದಿನಗಳ ಹಿಂದೆ ಶಿಶು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.