ADVERTISEMENT

ಬೆಳಗಾವಿ ಡಿಸಿ ಕಚೇರಿ ನೌಕರ ನಿಧನ; ಸಹೋದರನಿಗೆ 24ಗಂಟೆಯಲ್ಲೇ ಅನುಕಂಪ ಆಧಾರದ ನೌಕರಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 14:37 IST
Last Updated 23 ಆಗಸ್ಟ್ 2022, 14:37 IST
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಅವರು ತಮ್ಮ ಕಚೇರಿಯಲ್ಲಿ ಬಸವರಾಜ ಬಾದುಲೆ ಅವರಿಗೆ ನೇಮಕಾತಿ ಆದೇಶ ನೀಡಿದರು
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಅವರು ತಮ್ಮ ಕಚೇರಿಯಲ್ಲಿ ಬಸವರಾಜ ಬಾದುಲೆ ಅವರಿಗೆ ನೇಮಕಾತಿ ಆದೇಶ ನೀಡಿದರು   

ಬೆಳಗಾವಿ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ‌ಸೇವೆಯಲ್ಲಿದ್ದ ಪ್ರಥಮ ದರ್ಜೆ ಸಹಾಯಕರೊಬ್ಬರು ನಿಧನ ಹೊಂದಿದ್ದರಿಂದ, ಅವರ ಅವಲಂಬಿತ ಕಿರಿಯ ಸಹೋದರನಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ 24 ಗಂಟೆಗಳಲ್ಲೇ ಅನುಕಂಪ ಆಧಾರದಲ್ಲಿ ನೌಕರಿ ನೀಡಿದ್ದಾರೆ.

ಸಚಿನ್ ಬಾದುಲೆ ಆ.22ರಂದು ಅನಾರೋಗ್ಯದಿಂದ ನಿಧನರಾಗಿದ್ದರು. ಕುಟುಂಬ ನಿರ್ವಹಣೆಗಾಗಿ ತಮಗೆ ಅನುಕಂಪ ಆಧಾರದಲ್ಲಿ ನೌಕರಿ ನೀಡಬೇಕೆಂದು ಅವರ ಸಹೋದರ ಬಸವರಾಜ‌‌‌ ಬಾದುಲೆ ಆ.23ರಂದು ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಡಿ.ಸಿ, ಬಸವರಾಜ ಅವರನ್ನು ಒಂದೇ ದಿನದಲ್ಲಿ ಗ್ರೂಪ್‌ ‘ಸಿ’ ಹುದ್ದೆಗೆ ನೇರ ನೇಮಕಾತಿ ಮಾಡಿದ್ದಾರೆ.

ಬಿ.ಎ. ಪದವೀಧರರಾಗಿರುವ ಬಸವರಾಜ ಅವರನ್ನು ಚಿಕ್ಕೋಡಿ ತಹಶೀಲ್ದಾರ್‌ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನಿಯುಕ್ತಿಗೊಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.