ADVERTISEMENT

ಚಿಕ್ಕೋಡಿ: ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾಗೆ 90,834 ಮತಗಳ ಅಂತರದಿಂದ ಗೆಲುವು

​ಪ್ರಜಾವಾಣಿ ವಾರ್ತೆ
Published 4 ಜೂನ್ 2024, 15:35 IST
Last Updated 4 ಜೂನ್ 2024, 15:35 IST
ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಆಯ್ಕೆಯಾದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಚುನಾವಣಾಧಿಕಾರಿ ರಾಹುಲ್‌ ಶಿಂಧೆ ಪ್ರಮಾಣಪತ್ರ ವಿತರಿಸಿದರು
ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಆಯ್ಕೆಯಾದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಚುನಾವಣಾಧಿಕಾರಿ ರಾಹುಲ್‌ ಶಿಂಧೆ ಪ್ರಮಾಣಪತ್ರ ವಿತರಿಸಿದರು   

ಚಿಕ್ಕೋಡಿ: ಲೋಕಸಭೆ ಕ್ಷೇತ್ರಕ್ಕೆ ಈ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮೊದಲ ಯತ್ನದಲ್ಲೇ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ 90,834 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಇಲ್ಲಿನ ಆರ್‌.ಡಿ ಕಾಲೇಜು ಆವರಣದಲ್ಲಿ ಮಂಗಳವಾರ ಬೆಳಿಗ್ಗೆ ಮತಗಳ ಎಣಿಕೆ ಪ್ರಕ್ರಿಯೆ ಆರಂಭಗೊಂಡಿತು. ಮಧ್ಯಾಹ್ನದವರೆಗೆ 22 ಸುತ್ತುಗಳ ಎಣಿಕೆ ನಡೆಯಿತು. ಮೊದಲ ಸುತ್ತಿನಲ್ಲಿ 8,533 ಮತಗಳ ಮುನ್ನಡೆ ಸಾಧಿಸಿದ ಪ್ರಿಯಾಂಕಾ, ಎರಡನೇ ಸುತ್ತಿನಲ್ಲಿ 20,314 ಮತಗಳ ಮುನ್ನಡೆ ಕಾಯ್ದುಕೊಂಡರು. 10, 16 ಮತ್ತು 17ನೇ ಸುತ್ತುಗಳಲ್ಲಿ ಅಣ್ಣಾಸಾಹೇಬ ಜೊಲ್ಲೆ ಹೆಚ್ಚಿನ ಮತ ಗಳಿಸಿದ್ದು ಬಿಟ್ಟರೆ, ಪ್ರತಿ ಸುತ್ತಿನಲ್ಲೂ ಪ್ರಿಯಾಂಕಾ ಹೆಚ್ಚಿನ ಮತಗಳೊಂದಿಗೆ ತಮ್ಮ ಗೆಲುವಿನ ಅಂತರ ಹೆಚ್ಚಿಸಿಕೊಳ್ಳುತ್ತ ಹೋದರು.

ತಮ್ಮ ಅಭ್ಯರ್ಥಿ ಗೆಲ್ಲುವುದು ಖಾತ್ರಿಯಾಗುತ್ತಿದ್ದಂತೆ ಕಾಲೇಜಿನ ಹೊರಗೆ ಬೆಂಬಲಿಗರು ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ವಿಜಯೋತ್ಸವ ಆರಂಭಿಸಿದ್ದರು.

ಕಣದಲ್ಲಿ 18 ಮಂದಿ: ಚಿಕ್ಕೋಡಿ ಕ್ಷೇತ್ರದಲ್ಲಿ 18 ಮಂದಿ ಕಣದಲ್ಲಿದ್ದರು. ಈ ಪೈಕಿ ಪ್ರಿಯಾಂಕಾ ಜಾರಕಿಹೊಳಿ 7,13,461 ಮತ ಪಡೆದರೆ, ಅಣ್ಣಾಸಾಹೇಬ ಜೊಲ್ಲೆ 6,22,627 ಮತ ಗಳಿಸಿದರು. ಪಕ್ಷೇತರರಾಗಿ ಕಣಕ್ಕಿಳಿದಿದ್ದ ಶಂಭು ಕಲ್ಲೋಳಿಕರ 25,466 ಮತ ಪಡೆದರು. ಏಳು ಅಭ್ಯರ್ಥಿಗಳ ಪಡೆದ ಮತ ಮೂರಂಕಿ ದಾಟಲಿಲ್ಲ. 2,608 ಮತದಾರರು ‘ನೋಟಾ’ ಚಲಾಯಿಸಿದ್ದಾರೆ.
ಒಟ್ಟು 13,93,093 ಮತ ಚಲಾವಣೆಯಾಗಿವೆ. 9,600 ಅಂಚೆ ಮತಗಳ ಪೈಕಿ ಪ್ರಿಯಾಂಕಾ 4,459, ಅಣ್ಣಾಸಾಹೇಬ 2,638 ಮತ ಗಳಿಸಿದ್ದಾರೆ. 2,236 ಅಂಚೆ ಮತ ತಿರಸ್ಕೃತವಾಗಿವೆ.

ಬಿಗಿ ಭದ್ರತೆ: ಮತ ಎಣಿಕೆ ಕೇಂದ್ರದ ಆವರಣದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಚುನಾವಣೆ ಸಿಬ್ಬಂದಿ, ಅಧಿಕಾರಿಗಳು, ಪತ್ರಕರ್ತರು, ಚುನಾವಣೆ ಏಜೆಂಟರು ಸೇರಿದಂತೆ ಪ್ರತಿಯೊಬ್ಬರ ತಪಾಸಣೆ ನಡೆಸಿ, ಕೇಂದ್ರದೊಳಗೆ ಬಿಟ್ಟರು.

ADVERTISEMENT

ಆವರಣದಲ್ಲಿ ನಿಲ್ಲಿಸಿದ್ದ ಸರ್ಕಾರಿ ವಾಹನಗಳ ಚಾಲಕರು ಉಪಾಹಾರ ಸಿಗದೆ ಪರದಾಡುವಂತಾಯಿತು.

ಚಿಕ್ಕೋಡಿ ಲೋಕಸಭೆ ಕ್ಷೇತ್ರ;

ಅಭ್ಯರ್ಥಿಗಳು ಪಡೆದ ಮತಗಳ ವಿವರ ಹೆಸರು;ಪ್ರತಿನಿಧಿಸಿದ ಪಕ್ಷ;ಪಡೆದ ಮತಅಣ್ಣಾಸಾಹೇಬ ಜೊಲ್ಲೆ;ಬಿಜೆಪಿ;622627ಪ್ರಿಯಾಂಕಾ ಜಾರಕಿಹೊಳಿ;ಕಾಂಗ್ರೆಸ್‌;713461ಅಪ್ಪಾಸಾಹೇಬ ಕುರಣೆ;ಸರ್ವ ಜನತಾ ಪಕ್ಷ;4654ಕುಮಾರ ಡೊಂಗರೆ;ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ;941ಪವನಕುಮಾರ ಮಾಳಗೆ;ಬಹುಜನ ಭಾರತ ಪಾರ್ಟಿ;666ಸತ್ಯಪ್ಪ ಕಾಳೇಲಿ;ಭಾರತೀಯ ಜವಾನ್‌ ಕಿಸಾನ್‌ ಪಾರ್ಟಿ;1319ಕಾಡಯ್ಯ ಹಿರೇಮಠ;ಪಕ್ಷೇತರ;647ಕಾಶಿನಾಥ ಕುರಣಿ;ಪಕ್ಷೇತರ;1108ಗಜಾನನ ಪೂಜಾರಿ;ಪಕ್ಷೇತರ;600ಜಿತೇಂದ್ರ ನೇರ್ಲೆ;ಪಕ್ಷೇತರ;457ಭೀಮಸೇನ ಸನದಿ;ಪಕ್ಷೇತರ;619 ಮಹೇಶ ಕಾಸರ;ಪಕ್ಷೇತರ;1009ಮೋಹನ ಮೋಟನ್ನವರ;ಪಕ್ಷೇತರ;946 ಯಾಸಿನ್‌ ಪಟಕಿ;ಪಕ್ಷೇತರ;1281ವಿಲಾಸ ಮಣ್ಣೂರ;ಪಕ್ಷೇತರ;4150 ಶಂಭು ಕಲ್ಲೋಳಿಕರ;ಪಕ್ಷೇತರ;25466 ಶ್ರೇನಿಕ್‌ ಜಾಂಗಟೆ;ಪಕ್ಷೇತರ;5181ಸಮ್ಮೇದ್‌ ವರ್ಧಮಾನೆ;ಪಕ್ಷೇತರ;5353

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.