ಬೆಳಗಾವಿ: ಎಸ್‌ಡಿಎ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ತಹಶೀಲ್ದಾರ್ ಬಸವರಾಜ ನಾಗರಾಳ ಶುಕ್ರವಾರ ಕಚೇರಿಗೆ ಬಂದು, ಕೆಲಸಕ್ಕೆ ಹಾಜರಾದರು.
ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ತಹಶೀಲ್ದಾರ್ ಬಸವರಾಜ ನಾಗರಾಳ, ಎಫ್‌ಡಿಎ ಅಶೋಕ ಕಬ್ಬಲಿಗೇರ ಹಾಗೂ ಸೋಮು ದೊಡವಾಡಿ ಅವರಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ.
‘ಯಾವುದೇ ಸರ್ಕಾರಿ ಅಧಿಕಾರಿ 48 ಗಂಟೆ ಜೈಲು ಸೇರಿದ್ದರೆ ಮಾತ್ರ ಅಮಾನತು ಮಾಡಲು ಅವಕಾಶವಿದೆ. ಹೀಗಾಗಿ, ತಹಶೀಲ್ದಾರ್ ಅಮಾನತು ಆಗಿಲ್ಲ. ಪ್ರಕರಣ ನಡೆದಿರುವುದರಿಂದ ಅವರಿಗೆ ಕೆಲಸ ಮಾಡಲು ಅವಕಾಶ ಕೊಡುವುದಿಲ್ಲ. ರಜೆಯ ಮೇಲೆ ಕಳುಹಿಸಬೇಕೆ ಅಥವಾ ಬೇರೆ ಏನು ಮಾಡಲು ಅವಕಾಶವಿದೆ ಎಂದು ಪರಾಮರ್ಶಿಸಿ ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.