ADVERTISEMENT

ಬೆಳಗಾವಿ | ನಕಲಿ ಖಾತೆ ತೆರೆದು ವಂಚನೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 15:21 IST
Last Updated 15 ನವೆಂಬರ್ 2024, 15:21 IST
<div class="paragraphs"><p>ನಕಲಿ ಖಾತೆ</p></div>

ನಕಲಿ ಖಾತೆ

   

ಬೆಳಗಾವಿ: ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆರೋಪದಡಿ, ಇಬ್ಬರು ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದ ಅಲುವರ್‌ ಜಿಲ್ಲೆಯ ಅರ್ಬಾಝ್‌ ಹಸಮ್‌ಖಾನ್‌(19), ಮಧ್ಯಪ್ರದೇಶದ ಚತರಪುರ ಜಿಲ್ಲೆಯ ವಿಜಯಕುಮಾರ ಕಿಶೋರಿಲಾಲ್‌ ತಿವಾರಿ(46) ಬಂಧಿತರು.

ADVERTISEMENT

‘ನಾನು ಸೇರಿದಂತೆ ಮೂವರು ಐಪಿಎಸ್‌ ಅಧಿಕಾರಿಗಳು ಮತ್ತು ಇಬ್ಬರು ಐಎಎಸ್‌ ಅಧಿಕಾರಿಗಳ ಹೆಸರಿನಲ್ಲಿ ಅರ್ಬಾಝ್‌ ನಕಲಿ ಫೇಸ್‌ಬುಕ್‌ ಖಾತೆ ತೆರೆದಿದ್ದ. ಸಾರ್ವಜನಿಕರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿ, ಆನ್‌ಲೈನ್‌ ಮೂಲಕ ಹಣ ಪಡೆದು ವಂಚಿಸುತ್ತಿದ್ದ. ವಿಜಯಕುಮಾರ ಆತನಿಗೆ ಸಹಕರಿಸಿದ್ದ. ಇಬ್ಬರನ್ನೂ ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.