ADVERTISEMENT

ಉಮೇಶ ಕತ್ತಿ ನಿಧನ: ಬೆಳಗಾವಿಯ ಶಾಲೆ, ಕಾಲೇಜುಗಳಿಗೆ ರಜೆ- ಒಂದು ದಿನ ಶೋಕಾಚರಣೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 4:27 IST
Last Updated 7 ಸೆಪ್ಟೆಂಬರ್ 2022, 4:27 IST
ಹಿರಿಯ ಧುರೀಣ, ಸಚಿವ ಉಮೇಶ ಕತ್ತಿ ಅವರ ನಿಧನ
ಹಿರಿಯ ಧುರೀಣ, ಸಚಿವ ಉಮೇಶ ಕತ್ತಿ ಅವರ ನಿಧನ   

ಬೆಳಗಾವಿ: ಜಿಲ್ಲೆಯ ಹಿರಿಯ ಧುರೀಣ, ಸಚಿವ ಉಮೇಶ ಕತ್ತಿ ಅವರ ನಿಧನದ ಹಿನ್ನೆಲೆಯಲ್ಲಿ ಬುಧವಾರ ಒಂದು ದಿನ ಜಿಲ್ಲೆಯಾದ್ಯಂತ ಶೋಕ ಆಚರಿಸಲಾಗುವುದು. ಎಲ್ಲ ಸರ್ಕಾರಿ ಕಚೇರಿಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಅಲ್ಲದೇ, ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಿಗೂ ಬುಧವಾರ ಒಂದು ದಿನದ ರಜೆ ಘೋಷಣೆ ಮಾಡಿದ್ದಾರೆ.

ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸಾರ್ವಜನಿಕ ದರ್ಶನ:
ಉಮೇಶ ಕತ್ತಿ ಅವರ ಪಾರ್ಥಿವ ಶರೀರವನ್ನು ವಿಶೇಷ ವಿಮಾನದ ಮೂಲಕ ಬುಧವಾರ ಬೆಳಿಗ್ಗೆ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಗುವುದು. ಇಲ್ಲಿ ಸರ್ಕಾರಿ ಗೌರವ ಸಲ್ಲಿಸಿದ ಬಳಿಕ ರಸ್ತೆಯ ಮೂಲಕ ನೇರವಾಗಿ ಸಂಕೇಶ್ವರದ ಅವರ ಹಿರಾ ಸಕ್ಕರೆ ಕಾರ್ಖಾನೆಗೆ ತೆಗೆದುಕೊಂಡು ಹೋಗಲಾಗುವುದು. ಅವರ ಸ್ವಂತ ತೋಟದಲ್ಲಿ ಸಂಜೆಅಂತ್ಯಕ್ರಿಯೆ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕತ್ತಿ ಕುಟುಂಬದ ಆಪ್ತರು "ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

ADVERTISEMENT

ಸಚಿವ ಉಮೇಶ ಕತ್ತಿ ಅವರ ಶರೀರ ತರುವ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಲವು ಸಚಿವರು ಬೆಳಗಾವಿಗೆ ಆಗಮಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.