ಬೆಳಗಾವಿ: ಮೊದಲ ಬಾರಿಗೆ ಮಂತ್ರಿ ಸ್ಥಾನ ಪಡೆದ ಖುಷಿಯಲ್ಲಿರುವ ಲಕ್ಷ್ಮೀ ಹೆಬ್ಬಾಳಕರ ಅವರ ಪಾಲಿಗೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ. ಮಿನಿಸ್ಟರ್ ಕುರ್ಚಿ ಜತೆಗೇ ಅವರಿಗೆ ಅಜ್ಜಿ ಪದವಿಯೂ ಸಿಕ್ಕಿದೆ.
ಲಕ್ಷ್ಮೀ ಅವರ ಪುತ್ರ ಮೃಣಾಲ್ ಹಾಗೂ ಸೊಸೆ ಡಾ.ಹಿತಾ ಅವರಿಗೆ ಶುಕ್ರವಾರ ತಡರಾತ್ರಿ ಹೆಣ್ಣುಮಗು ಜನಿಸಿದೆ.
ಬೆಂಗಳೂರಿನಲ್ಲಿ ಶನಿವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಕೆಲವೇ ಗಂಟೆಗಳ ಮುಂಚೆ ಅವರಿಗೆ ಅಜ್ಜಿಯಾದ ಹಿರಿಮೆಯೂ ಸಿಕ್ಕಿದೆ.
ಇದರಿಂದ ಅವರ ಮನೆಯಲ್ಲಿ ಈಗ ಡಬಲ್ ಸಂಭ್ರಮ ನೆಲೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.