ADVERTISEMENT

ಹುಕ್ಕೇರಿ | ಕ್ರಿಯಾಶೀಲತೆ ಹೆಚ್ಚಳಕ್ಕೆ ಸಹಪಠ್ಯ ಚಟುವಟಿಕೆ ಪೂರಕ: ಬಿಇಒ

ಶಿಕ್ಷಕರಿಗೆ ತಾಲ್ಲೂಕು ಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆ: ಬಿಇಒ ಪ್ರಭಾವತಿ ಪಾಟೀಲ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2023, 13:32 IST
Last Updated 19 ನವೆಂಬರ್ 2023, 13:32 IST
ಹುಕ್ಕೇರಿಯಲ್ಲಿ ಜರುಗಿದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಿಇಒ ಪ್ರಭಾವತಿ ಪಾಟೀಲ ಬಹುಮಾನ ವಿತರಿಸಿದರು
ಹುಕ್ಕೇರಿಯಲ್ಲಿ ಜರುಗಿದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಿಇಒ ಪ್ರಭಾವತಿ ಪಾಟೀಲ ಬಹುಮಾನ ವಿತರಿಸಿದರು   

ಹುಕ್ಕೇರಿ: ಶಿಕ್ಷಕರು ಸಹಪಠ್ಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಕ್ರಿಯಾಶೀಲತೆ ಹೆಚ್ಚುವುದು. ವಿದ್ಯಾರ್ಥಿಗಳಿಗೆ ಶಿಕ್ಷಕರು ಪಾಠ ಬೋಧನೆ ಮಾಡುವಾಗ ಸಹಪಠ್ಯದ ಜ್ಞಾನ ಪೂರಕವಾಗಿ ಕಾರ್ಯನಿರ್ವಹಿಸುವುದು ಎಂದು ಬಿಇಒ ಪ್ರಭಾವತಿ ಪಾಟೀಲ ಹೇಳಿದರು.

ಬಿಆರ್‌ಸಿ ಮತ್ತು ಗಾಂಧಿ ನಗರದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ, ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ಶಿಕ್ಷಕರ ಕಲ್ಯಾಣ ನಿಧಿ ಸಂಯೋಜನೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆಯಲ್ಲಿ ವಿಜೇತತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸವಿತಾ ಹಲಕಿ, ಕ್ಷೇತ್ರ ಸಮನ್ವಯಾಧಿಕಾರಿ ಎ.ಎಸ್.ಪದ್ಮನ್ನವರ ಮತ್ತು ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ರವೀಂದ್ರ ಶೆಟ್ಟಿಮನಿ, ನೋಡಲ್ ಅಧಿಕಾರಿ ಮತ್ತು ಶಿಕ್ಷಣ ಸಂಯೋಜಕ ಪ್ರೀತಂ ನಿಡಸೋಸಿ ಮಾತನಾಡಿದರು.

ADVERTISEMENT

ಸ್ಪರ್ಧೆಗಳು: ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ಶಿಕ್ಷಕರಿಗಾಗಿ ಪ್ರತ್ಯೇಕವಾಗಿ ಆಶುಭಾಷಣ, ಪ್ರಬಂಧ, ಚಿತ್ರಕಲೆ, ಜನಪದ ಗೀತೆ, ಪಾಠೋಪಕರಣಗಳ ತಯಾರಿಕೆ, ರಸಪ್ರಶ್ನೆ (ಸಾಮಾನ್ಯ ಜ್ಞಾನ) ಮತ್ತು ರಸಪ್ರಶ್ನೆ (ವಿಜ್ಞಾನ) ಸ್ಪರ್ಧೆ ಏರ್ಪಡಿಸಲಾಗಿತ್ತು.

ಬಹುಮಾನ ವಿತರಣೆ: ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ವಿಜೇತ ಶಿಕ್ಷಕರಿಗೆ ಪ್ರತ್ಯೇಕವಾಗಿ ಪ್ರಥಮ ₹1500, ದ್ವಿತೀಯ ₹1000 ಮತ್ತು ತೃತೀಯ ₹500 ನಗದನ್ನು ಬಹುಮಾನವಾಗಿ ವಿತರಿಸಲಾಯಿತು.

ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಪದಾಧಿಕಾರಿಗಳು, ತಾಲ್ಲೂಕಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಪಧಾದಿಕಾರಿಗಳು ಇದ್ದರು.

ಶಿಕ್ಷಣ ಸಂಯೋಜಕ ಪ್ರೀತಂ ನಿಡಸೋಸಿ ಸ್ವಾಗತಿಸಿದರು. ಬಿ.ಆರ.ಸಿ. ಎಂ.ವಿ.ಮಾಸ್ತಮರಡಿ ನಿರೂಪಿಸಿದರು. ಶಿಕ್ಷಣ ಸಂಯೋಜಕ ಆರ್.ಆರ್.ಘಸ್ತಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.