ADVERTISEMENT

ಭಜನಾ ತಂಡಗಳು ತಂದ ಉತ್ಸವದ ಮೆರುಗು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 14:27 IST
Last Updated 27 ಅಕ್ಟೋಬರ್ 2024, 14:27 IST
   

ಚನ್ನಮ್ಮನ ಕಿತ್ತೂರು: ಕಿತ್ತೂರು ಉತ್ಸವದ ವೈವಿಧ್ಯಮಯ ಕಾರ್ಯಕ್ರಮಗಳು ಮುಗಿದು ನಿಶಬ್ದ ಸ್ಥಿತಿಗೆ ಮರಳಿದ್ದ ಇಲ್ಲಿನ ಕೋಟೆ ಆವರಣವು ಭಜನೆ ತಂಡಗಳ ಸ್ಪರ್ಧೆಯಿಂದ ಭಾನುವಾರ ಮತ್ತೆ ಕಳೆಗಟ್ಟಿತ್ತು.

ಉತ್ಸವ ಪ್ರಯುಕ್ತ ನಡೆದ ಭಜನಾ ಸ್ಪರ್ಧೆಗಳಲ್ಲಿ ಪದಗಳನ್ನು ಕೇಳಲು ಮತ್ತು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಚನ್ನಮ್ಮನ ಕಿತ್ತೂರು, ಬೈಲಹೊಂಗಲ, ಖಾನಾಪುರ ತಾಲ್ಲೂಕಿನಿಂದ ವಿವಿಧ ತಂಡಗಳು, ಸಾರ್ವಜನಿಕರು ಆಗಮಿಸಿದ್ದರು.

‘ಶಾಸಕ ಬಾಬಾಸಾಹೇಬ ಪಾಟೀಲ ಅವರ ಒತ್ತಾಸೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಸ್ಪರ್ಧೆ ಆಯೋಜಿಸಿದೆ. 40ಕ್ಕೂ ಹೆಚ್ಚು ತಂಡ ಭಾಗವಹಿಸಿವೆ. ತಡರಾತ್ರಿ ಫಲಿತಾಂಶ ಬರಲಿದೆ’ ಎಂದು ಸಂಘಟಕರು ತಿಳಿಸಿದರು.

ADVERTISEMENT

ನಿಚ್ಚಣಕಿಯ ಪಂಚಾಕ್ಷರಿ ಸ್ವಾಮೀಜಿ, ಶಾಸಕ ಬಾಬಾಸಾಹೇಬ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಬಿಇಒ ಚನಬಸಪ್ಪ ತುಬಾಕಿ, ಸಿಪಿಐ ಶಿವಾನಂದ ಗುಡಗನಟ್ಟಿ, ಮುಖಂಡರಾದ ಅಶ್ಫಾಕ್ ಹವಾಲ್ದಾರ, ಬಸವರಾಜ ಸಂಗೊಳ್ಳಿ, ಸುನೀಲ ಘಿವಾರಿ, ಚಂದ್ರಗೌಡ ಪಾಟೀಲ, ಪಟ್ಟಣ ಪಂಚಾಯಿತಿ ಸದಸ್ಯ ಶಂಕರ ಬಡಿಗೇರ, ಪ್ರೊ. ಎನ್.ಎಸ್. ಗಲಗಲಿ, ಚಿಕ್ಕನಂದಿಹಳ್ಳಿ ಚಂದ್ರಗೌಡ, ಶಿಕ್ಷಕ ವಿವೇಕ ಕುರಗುಂದ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.