ADVERTISEMENT

ಒಂದು ಹೊತ್ತು ಊಟ ಬಿಟ್ಟರೂ ಕಲಿಕೆ ಬಿಡಬೇಡಿ: ಬಸನಗೌಡ ಪಾಟೀಲ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 13:51 IST
Last Updated 18 ಜನವರಿ 2024, 13:51 IST
ಕೌಜಲಗಿ ಸಮೀಪದ ಕುಲಗೋಡ ಗ್ರಾಮದಲ್ಲಿ ಮಂಗಳವಾರ ಭೀಮ ಆರ್ಮಿ ನೂತನ ಸಂಘಟನೆಗೆ ಚಾಲನೆ ನೀಡಲಾಯಿತು
ಕೌಜಲಗಿ ಸಮೀಪದ ಕುಲಗೋಡ ಗ್ರಾಮದಲ್ಲಿ ಮಂಗಳವಾರ ಭೀಮ ಆರ್ಮಿ ನೂತನ ಸಂಘಟನೆಗೆ ಚಾಲನೆ ನೀಡಲಾಯಿತು   

ಕೌಜಲಗಿ: ‘ಅಂಬೇಡ್ಕರರ ಹಾಗೆ ಶಿಕ್ಷಣಕ್ಕೆ ಆದ್ಯತೆ ನೀಡಿ. ಒಂದು ಹೊತ್ತು ಊಟ ಬಿಟ್ಟರೂ ಕಲಿಕೆ ಬಿಡಬೇಡಿ’ ಎಂದು ಮುಖಂಡ ಬಸನಗೌಡ ಪಾಟೀಲ ಹೇಳಿದರು.

ಸಮೀಪದ ಕುಲಗೋಡ ಗ್ರಾಮದಲ್ಲಿ ಮಂಗಳವಾರ ಜರುಗಿದ ಭೀಮ ಆರ್ಮಿ ಸಂಘಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿನ ಯುವಜನರು ಮೋಜುಮಸ್ತಿಗಾಗಿ ಸಂಘಟಿತರಾಗುತ್ತಾರೆ. ಅನ್ಯಾಯದ ವಿರುದ್ಧ, ಶಿಕ್ಷಣ ಕ್ರಾಂತಿಗಾಗಿ ಸಂಘಟಿತರಾಗಬೇಕು. ಯುವಕರು ದುಷ್ಟ ಹವ್ಯಾಸಗಳಿಗೆ ಒಳಗಾಗದೇ ಸಮಾಜ ಸೇವೆ ಮಾಡಬೇಕು’ ಎಂದು ಕರೆ ನೀಡಿದರು.

ADVERTISEMENT

ಅಂಬೇಡ್ಕರರ ಜೀವನ ಆದರ್ಶಗಳ ಕುರಿತು ಬಸವರಾಜ ಜಾಲವಾದಿ ಹಾಗೂ ಸಂತೋಷ ದೊಡಮನಿ ಉಪನ್ಯಾಸ ನೀಡಿದರು. ಕುಲಗೋಡ ಘಟಕದ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ನೀಡಿ ಗೌರವಿಸಲಾಯಿತು.

ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಅಶೋಕ ನಾಯಿಕ, ಬಸನಗೌಡ ಪಾಟೀಲ, ಸುಭಾಸ ವಂಟಗೋಡಿ, ಸುನೀಲ ವಂಟಗೋಡಿ, ಭೀಮಶಿ ಪೂಜೇರಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ತಮ್ಮಣ್ಣಾ ದೇವರ, ಡಿ.ಎಸ್.ಎಸ್ ಮುಖಂಡ ಲಕ್ಷ್ಮಣ ತೆಳಗಡೆ, ರಮೇಶ ಸಣ್ಣಕ್ಕಿ, ರಮೇಶ ಕೇಸರಗೊಪ್ಪ, ಜಗದೀಶ ಬೆಳಗಲಿ, ಅಲ್ಲಪ್ಪ ಪರುಶೆಟ್ಟಿ, ಸುಶೀತ ನಾಯಿಕ, ಎ.ಬಿ.ಜಮಾದಾರ, ಸುನೀಲ ಕೊಟಬಾಗಿ, ಕುಮಾರ ಕಡಹಟ್ಟಿ, ಶಾಬು ಸಣ್ಣಕ್ಕಿ, ಅಶೋಕ ಶಿದ್ಲಿಂಗಪ್ಪಗೋಳ, ಪ್ರೇಮ ಬಿ.ಬಿ., ಪ್ರಕಾಶ ಹಿರೇಮೇತ್ರಿ, ಶಂಕರ ಹಾದಿಮನಿ ಹಾಗೂ ಯಮನಪ್ಪ ಸಣ್ಣಮೇತ್ರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.