ADVERTISEMENT

ಬೆಳಗಾವಿ: 5 ಅಂಗನವಾಡಿ ಕಟ್ಟಡಗಳಿಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 14:03 IST
Last Updated 16 ನವೆಂಬರ್ 2024, 14:03 IST
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವಿವಿಧೆಡೆ ನಿರ್ಮಿಸಲಾಗುವ 5 ಅಂಗನವಾಡಿ ಕಟ್ಟಡಗಳ ಕಾಮಗಾರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಶುಕ್ರವಾರ ಚಾಲನೆ ನೀಡಿದರು
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವಿವಿಧೆಡೆ ನಿರ್ಮಿಸಲಾಗುವ 5 ಅಂಗನವಾಡಿ ಕಟ್ಟಡಗಳ ಕಾಮಗಾರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಶುಕ್ರವಾರ ಚಾಲನೆ ನೀಡಿದರು   

ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಶುಕ್ರವಾರ ಸಂಜೆ ‌ಬೆಳಗಾವಿ ಗ್ರಾಮೀಣ ಕ್ಷೇತ್ರದ ಐದು ಗ್ರಾಮಗಳಲ್ಲಿ ಅಂಗನವಾಡಿಯ ನೂತನ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ನಿಲಜಿ, ಮುತಗಾ, ಪಂತಬಾಳೇಕುಂದ್ರಿ, ಮಾವಿನಕಟ್ಟಿ ಹಾಗೂ ಶೆಗಣಮಟ್ಟಿ ಗ್ರಾಮಗಳಲ್ಲಿ ನೂತನ ಅಂಗನವಾಡಿ ಕಟ್ಟಡಗಳು ನಿರ್ಮಾಣಗೊಳ್ಳಲಿವೆ. ಇದರ ಜೊತೆಗೆ ಪಂತ ಬಾಳೆಕುಂದ್ರಿಯಲ್ಲಿ ರಾಜಮಾರ್ಗ ರಸ್ತೆ ನಿರ್ಮಾಣದ ಕಾಮಗಾರಿಗೆ ಸಹ ಭೂಮಿಪೂಜೆ ನೆರವೇರಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾಗರಾಜ ಉಪಸ್ಥಿತರಿದ್ದರು. 

‘ಕ್ಷೇತ್ರದಲ್ಲಿ ವರ್ಷದ 365 ದಿನವೂ ಒಂದಿಲ್ಲೊಂದು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಎಂದಿಗೂ ನಿಲ್ಲುವುದಿಲ್ಲ. ಇಡೀ ರಾಜ್ಯದಲ್ಲಿ ಮಾದರಿಯಾಗಿ ಕ್ಷೇತ್ರವನ್ನು ನಿಲ್ಲಿಸುವುದೇ ನನ್ನ ಗುರಿ. ಅದರಂತೆ ನಿಮ್ಮೆಲ್ಲರ ಸಹಕಾರವಿರಲಿ’ ಎಂದು ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ADVERTISEMENT

ನಿಲಜಿಯಲ್ಲಿ ಪೂಜೆಯ ಸಂದರ್ಭದಲ್ಲಿ ಬಾಲಕೃಷ್ಣ ಕೋಲಕಾರ, ಶುಭಂ ಕೋಲಕಾರ್, ರಾಘವೇಂದ್ರ ಕೋಲಕಾರ, ದೀಪಕ್ ಕೇತ್ಕರ್, ವೀಣಾ ಕೋಲಕಾರ್, ವಿಶಾಲ ಪಾಟೀಲ, ಓಂಕಾರ್ ಕೋಲಕಾರ್, ಸಂದೀಪ್ ಮೊದಗೇಕರ್, ಲಖನ್ ಮೊದಗೇಕರ್, ಪ್ರವೀಣ ಪಾಟೀಲ, ಪ್ರಸಾದ ಮುಕುಂದ, ರೋಹಿತ್ ಪಾಟೀಲ, ಓಂಕಾರ್ ಮೊದಗೇಕರ್, ಋಷಿಕೇಶ್ ಮೊದಗೇಕರ್, ಪರಶುರಾಮ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.

ಮುತಗಾ ಗ್ರಾಮದಲ್ಲಿ ಸ್ನೇಹಲ್ ಪೂಜೇರಿ, ಗಜು ಕಣಬರ್ಕರ್, ಪಿಂಟು ಮಲ್ಲವ್ವಗೋಳ, ಮಾರುತಿ‌ ಪೂಜೇರಿ, ರಾಯಣ್ಣ ಮಲ್ಲುಗೋಳ, ಶ್ಯಾಮ್ ಮುತಗೇಕರ್, ರಾಜು ಪಾಟೀಲ, ಪ್ರಭಾಕರ್ ತಳವಾರ್, ರಾಕೇಶ್ ಪಾಟೀಲ, ಭೀಮಾ ಮಲ್ಲುಗೋಳ ಉಪಸ್ಥಿತರಿದ್ದರು.

ಪಂತ ಬಾಳೇಕುಂದ್ರಿಯ ಪೂಜೆ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧಕ್ಷೆ ಗುಲಾಬಿ ಕೋಲಕಾರ, ಉಪಾಧ್ಯಕ್ಷೆ ಬಿ.ಬಿ. ಹನೀಫಾ, ಮೈನೂದ್ದಿನ್ ಅಗಸಿಮನಿ, ಇಸ್ಮಾಯಿಲ್ ಮಕಾನದಾರ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ಮಾವಿನಕಟ್ಟಿ ಗ್ರಾಮದಲ್ಲಿ ಉಳವಪ್ಪ ಮಲ್ಲಣ್ಣವರ, ಚನ್ನಪ್ಪ ಹಿರೇಹೊಳಿ, ನಾಗರಾಜ ಗಣಿಕೊಪ್ಪ, ಬಸವಣ್ಣೆಪ್ಪ ಅರಗಂಜಿ, ನಾಗರಾಜ ಅರಗಂಜಿ, ಬಸವರಾಜ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಶೇಗಣಮಟ್ಟಿ ಗ್ರಾಮದಲ್ಲಿ  ವಿಶ್ವನಾಥ ಕೆ, ಮಹಾವೀರ ಪಾಟೀಲ, ಪಾರಿಶ್ ಪಾಟೀಲ, ಗುಂಡು ದೇಸಾಯಿ, ಹನಮಂತ ಪಾಟೀಲ, ಸಂತೋಷ ಅಷ್ಟೇಕರ್, ರಫೀಕ್ ಸನದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.