ADVERTISEMENT

ಪಾಲಿಕೆ ಆಯುಕ್ತರ ಸರ್ಕಾರಿ ನಿವಾಸದ ಗೇಟ್‌ನಲ್ಲೇ ತ್ಯಾಜ್ಯ ಸುರಿದ ಬಿಜೆಪಿ ಶಾಸಕ!

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 3:48 IST
Last Updated 25 ಜುಲೈ 2021, 3:48 IST
ಆಯುಕ್ತ ಕೆ.ಎಚ್. ಜಗದೀಶ್ ಅವರ ಸರ್ಕಾರಿ ‌ನಿವಾಸದ ಗೇಟ್‌ಗೆ ತ್ಯಾಜ್ಯ ಸುರಿದ ಬಿಜೆಪಿ ಶಾಸಕ ಅಭಯ ಪಾಟೀಲ.
ಆಯುಕ್ತ ಕೆ.ಎಚ್. ಜಗದೀಶ್ ಅವರ ಸರ್ಕಾರಿ ‌ನಿವಾಸದ ಗೇಟ್‌ಗೆ ತ್ಯಾಜ್ಯ ಸುರಿದ ಬಿಜೆಪಿ ಶಾಸಕ ಅಭಯ ಪಾಟೀಲ.   

ಬೆಳಗಾವಿ: ಇಲ್ಲಿನ ದಕ್ಷಿಣ ಮತಕ್ಷೇತ್ರದಲ್ಲಿ ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲದಿರುವುದನ್ನು ಖಂಡಿಸಿ, ಬಿಜೆಪಿ ಶಾಸಕ ಅಭಯ ಪಾಟೀಲ ಅವರು ತ್ಯಾಜ್ಯ ತಂದು ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿರುವ ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್ ಅವರ ಸರ್ಕಾರಿ ‌ನಿವಾಸದ ಗೇಟ್‌ಗೆ ಸುರಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.

ಸ್ವತಃ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬೆಂಬಲಿಗರು ಹಾಗೂ ಕೆಲವು ಕಾರ್ಯಕರ್ತರ‌ ಜೊತೆ ಬಂದ ಶಾಸಕರು, ಆಯುಕ್ತರ ಮನೆಯ ಮುಂಭಾಗಕ್ಕೆ ತ್ಯಾಜ್ಯ ಸುರಿದು ಆಕ್ರೋಶ ವ್ಯಕ್ತಪಡಿಸಿದರು. ಗುದ್ದಲಿ ಹಿಡಿದು ಎಲ್ಲವನ್ನೂ ಹರಡಿದರು.

ಕ್ಷೇತ್ರದಲ್ಲಿ ತ್ಯಾಜ್ಯ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ. ಹಲವು ಬಾರಿ ಹೇಳಿದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗಾಗಿ, ಬಿಸಿ ಮುಟ್ಟಿಸಲು ಹಾಗೂ ಜನರಿಗೆ ಆಗುವ ತೊಂದರೆ ಅಧಿಕಾರಿಗಳ ಗಮನಕ್ಕೆ ಬರಲೆಂದು ಹೀಗೆ ಮಾಡಬೇಕಾಯಿತು ಎಂದು ಶಾಸಕ ಅಭಯ ಪಾಟೀಲ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.