ಬೆಳಗಾವಿ: ಮಿದುಳು ನಿಷ್ಕ್ರಿಯವಾದ ಯುವತಿಯೊಬ್ಬರ ಹೃದಯವನ್ನು ಧಾರವಾಡದಿಂದ ಬೆಳಗಾವಿಗೆ ಝೀರೊ ಟ್ರಾಫಿಕ್ ನಲ್ಲಿ ಸಾಗಿಸಲು ಕ್ಷಿಪ್ರ ಸಿದ್ಧತೆ ನಡೆಸಲಾಲಾಗಿದೆ. ಸೋಮವಾರ ಸಂಜೆ 4ಕ್ಕೆ ಈ ಹೃದಯ ತರಲಾಗುತ್ತಿದೆ.
ಅಪಘಾತದಿಂದ ಗಾಯಗೊಂಡ ಯುವತಿಯೊಬ್ಬರು ಧಾರವಾಡ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರ ಮಿದುಳು ನಿಷ್ಕ್ರಿಯವಾಗಿದ್ದು, ಹೃದಯ ಬಡಿದುಕೊಳ್ಳುತ್ತಿದೆ.
ಇದೇ ಕಾಲಕ್ಕೆ ಹೃದ್ರೋಗದಿಂದ ಬಳಲುತ್ತಿರುವ ಯುವಕ ಬೆಳಗಾವಿಯ ಕೆಎಲ್‌ಇಎಸ್‌ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಯುವಕನಿಗೆ ಹೃದಯ ಕಸಿ ಮಾಡಬೇಕಾಗಿದೆ. ಹೀಗಾಗಿ, ಧಾರವಾಡದ ಯುವತಿಯ ಹೃದಯವನ್ನೇ ಬೆಳಗಾವಿಯ ಯುವಕನಿಗೆ ಕಸಿ ಮಾಡಲು ಯುವತಿ ಪಾಲಕರು ಸಮ್ಮತಿಸಿದ್ದಾರೆ.
ಹೀಗಾಗಿ ಧಾರವಾಡ- ಬೆಳಗಾವಿ ಮಧ್ಯೆ ಝೀರೊ ಟ್ರಾಫಿಕ್ ಮೂಲಕ ಹೃದಯವನ್ನು ತರಲು ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.