ADVERTISEMENT

ಸ್ವಾವಲಂಬಿ ಬದುಕಿಗೆ ಧರ್ಮಸ್ಥಳ ಸಂಘ ಸಹಕಾರಿ: ಉದ್ಯಮಿ ರಾಜು ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 13:10 IST
Last Updated 16 ಜೂನ್ 2024, 13:10 IST
ಯರಗಟ್ಟಿ ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ನೇತೃತ್ವದಲ್ಲಿ ಭಾನುವಾರ  ಏರ್ಪಡಿಸಿದ್ದ ಅಂಗವಿಕಲರಿಗೆ ವೀಲ್‌ಚೇರ್ ವಿತರಣೆ ಕಾರ್ಯಕ್ರಮದಲ್ಲಿ ಅಂಗವಿಕಲರ ಕುಟುಂಬದ ಸದಸ್ಯರು ಸೌಲಭ್ಯವನ್ನು ಪಡೆದರು
ಯರಗಟ್ಟಿ ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ನೇತೃತ್ವದಲ್ಲಿ ಭಾನುವಾರ  ಏರ್ಪಡಿಸಿದ್ದ ಅಂಗವಿಕಲರಿಗೆ ವೀಲ್‌ಚೇರ್ ವಿತರಣೆ ಕಾರ್ಯಕ್ರಮದಲ್ಲಿ ಅಂಗವಿಕಲರ ಕುಟುಂಬದ ಸದಸ್ಯರು ಸೌಲಭ್ಯವನ್ನು ಪಡೆದರು   

ಯರಗಟ್ಟಿ: ‘ಮಹಿಳೆಯರು ಸ್ವಂತ ಉದ್ಯೋಗ ಮಾಡಲು ತರಬೇತಿ ನೀಡುವ ಜೊತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಸಹಕಾರಿಯಾಗಿದೆ’ ಎಂದು ಹೋಟೆಲ್‌ ಉದ್ಯಮಿ ರಾಜು ಶೆಟ್ಟಿ ಹೇಳಿದರು.

ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ವೀಲ್ ಚೇರ್ ಮತ್ತು ವಾಟರ್ ಬೆಡ್ ವಿತರಿಸಿ ಅವರು ಮಾತನಾಡಿದರು.

ಸಂಸ್ಥೆಯ ಜಿಲ್ಲಾ ನಿರ್ದೇಶಕ ಲವಕುಮಾರ ಮಾತನಾಡಿ, ‘ಸಂಸ್ಥೆ ಮಹಿಳೆಯರ ಅಭಿವೃದ್ಧಿ ಜೊತೆಗೆ ಕುಟಂಬದ ಪ್ರಗತಿಗೂ ಹಲವು ಯೋಜನೆ ರೂಪಿಸುತ್ತಿದೆ. ಮಹಿಳೆ ಹಾಗೂ ಪುರುಷರು ಒಟ್ಟಾಗಿ ಸಂಸ್ಥೆಯ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ADVERTISEMENT

ಸಂಸ್ಥೆಯ ಡಿ. ಸತೀಶ್, ನಾಗೇಶ ನಾಯ್ಕ, ಧಾರವಾಡ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ಆರತಿ, ಕಿಟ್ಟು ತೋರಗಲ್ಲ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.