ಚಿಕ್ಕೋಡಿ: ಇಲ್ಲಿನ ಕೆಎಲ್ಇ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ 255 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ ಎಂದು ಎಂದು ಪ್ರಾಚಾರ್ಯ ಡಾ. ಪ್ರಸಾದ ರಾಂಪುರೆ ತಿಳಿಸಿದ್ದಾರೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಉತ್ತಮ ವ್ಯಕ್ತಿತ್ವ, ಮಾನವೀಯತೆಯ ಮೌಲ್ಯಗಳನ್ನು ಬೆಳೆಸಿ ಅವರನ್ನು ನಾಡಿನ ಅತ್ಯುತ್ತಮ ಮೇಧಾವಿಗಳನ್ನಾಗಿ ರೂಪಿಸುವ ಗುರಿ ನಮ್ಮದು. ಈ ನಿಟ್ಟಿನಲ್ಲಿ ಉದ್ಯೋಗಾವಕಾಶ ಮತ್ತು ತರಬೇತಿ ಘಟಕದ ಆಶ್ರಯದಲ್ಲಿ ಹೆಸರಾಂತ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳಿಂದ ತರಬೇತಿಯನ್ನು ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗುತ್ತಿದೆ. ಇದರ ಫಲವಾಗಿ 2021-22 ನೇಯ ಸಾಲಿನಲ್ಲಿ ವಿಪ್ರೊ ಕಂಪೆನಿಯಲ್ಲಿ 39, ಇನ್ಫೊಸಿಸ್ 41, ಟಿ ಸಿಎಸ್ 21, ಕ್ಯಾಪ್ ಜೆಮಿನಿ 18, ಎಚ್.ಸಿ. ಎಲ್. 11, ಮೈಂಡ್ ಟ್ರಿ 3, ಎಂಸಿಸ್ 6, ಕ್ವೆಸ್ಟ್ ಗ್ಲೋಬಲ್ 6, ಅಲಿನ ಹೂ ಪ್ರಾ.ಲಿ. 4, ಎನ್. ಟಿ. ಟಿ ಡಾಟಾ 10, ಕೆಪಿಐಟಿ 5, ಗ್ಲೋಬಲ್ ಕ್ವೆಸ್ಟ ಟೆಕ್ನಾಲಾಜಿಸ್ 4, ಪಲ್ಲೆ ಟೆಕ್ನಾಲಜಿಸ್ 28, ಕ್ಯೂ-ಸ್ಪೈಡರ್ 36, ಕಾಡ್ನೆಸ್ಟ್ 3, ಇನ್ಫೊಸಿಸ್ ಡಿಜಿಟಲ್ 1, ಐ.ಬಿ.ಎಂ. 1, ಅರ್ಬ್ ಸ್ಟ್ರಕ್ಚರ್ 1, ರೊಬೋಸಾಫ್ಟ್ 1, ಎಕ್ಸ್‌ಪೆಲ್ಲೊ 3, ಹೆಕ್ಸಾವೆರ್ 3, ಎಲಿಯೆಶನ್ 5, ಕಾರ್ಮಿಕ ಡಿಜೈನ್ 3, ಡೆಕಪಂಡಿತ್ 1, ಟೆಕ್ ಮಹಿಂದ್ರಾ 1, ಟೆಕ್ನಾಲಾಜಿಸ್ ಗ್ಲೊಬಲ್ 1, ಇನ್ನಿತರ ಕಂಪನಿಗಳನ್ನು ಸೇರಿಸಿ ಒಟ್ಟು 255 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ.
ಇನ್ನೂ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ವಿದ್ಯಾರ್ಥಿಗಳು ₹ 3 ಲಕ್ಷದಿಂದ ₹ 6.5 ಲಕ್ಷ ಪ್ರತಿ ವರ್ಷದಂತೆ ಸಂಬಳ ಹೊಂದಿದ ಉದ್ಯೋಗ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ತರಬೇತಿ ಅಧಿಕಾರಿಗಳಾಗಿ ಪ್ರೊ. ಸಂಜಯ ಅಂಕಲಿ, ನೇಮಕಾತಿ ಅಧಿಕಾರಿಗಳಾಗಿ ಪ್ರೊ. ಮಹೇಶ ಲಟ್ಟೆ ಕಾರ್ಯನಿರ್ವಹಿಸಿದ್ದರು. ಈ ವಿದ್ಯಾರ್ಥಿಗಳಿಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರು, ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.