ADVERTISEMENT

ಜನರ ಮೇಲೆ ಹರಿದ ಕಾರು: ಮಹಿಳೆ ಸಾವು, 12 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 16:31 IST
Last Updated 28 ಜೂನ್ 2024, 16:31 IST
   

ಗೋಕಾಕ (ಬೆಳಗಾವಿ ಜಿಲ್ಲೆ): ಬೆಳಗಾವಿಯಿಂದ ಗೋಕಾಕ ಕಡೆಗೆ ಬರುತ್ತಿದ್ದ ಕಾರೊಂದು ಶುಕ್ರವಾರ, ರಸ್ತೆ ಬದಿ ನಿಂತಿದ್ದ ಜನರ ಗುಂಪಿನ ಮೇಲೆ ಹರಿದು ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 12 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ನಗರದ ನಾಕಾ ನಂಬರ್‌–1ರಲ್ಲಿ ಜನರು ಬಸ್ಸಿಗಾಗಿ ಕಾಯುತ್ತ ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿನ ಬಸ್‌ ಹಾಗೂ ಬೈಕ್‌ಗೆ ಡಿಕ್ಕಿ ಹೊಡೆಯಿತು. ಅಲ್ಲಿಂದ ಮುಂದೆ ಸಾಗಿ ಬಸ್ಸಿಗಾಗಿ ಕಾಯುತ್ತದ್ದ ಜನರ ಗುಂಪಿನ ಮೇಲೆ ನುಗ್ಗಿತು.

ಘಟೆನೆಯಲ್ಲಿ 45 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಅವರ ಹೆಸರು, ಊರು ಗೊತ್ತಾಗಿಲ್ಲ. ಎಲ್ಲ ಗಾಯಾಳುಗಳನ್ನೂ ಗೋಕಾಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್‌ ಸವಾರ ಸದಾಶಿವ ಮಹಾದೇವಪ್ಪ ಬನ್ನೂರ ಅವರು ಗೋಕಾಕ ನಗರ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

ಕಾರ್ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.