ADVERTISEMENT

ಕೋವಿಡ್‌–19 ಸೋಂಕಿತರ ಹೆಸರು ಬಹಿರಂಗ: ಫೇಸ್‌ಬುಕ್‌ ಪೇಜ್‌ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 2 ಮೇ 2020, 15:55 IST
Last Updated 2 ಮೇ 2020, 15:55 IST
ಫೇಸ್‌ಬುಕ್‌ ಪುಟ
ಫೇಸ್‌ಬುಕ್‌ ಪುಟ   

ಬೆಳಗಾವಿ: ಕೋವಿಡ್-19 ಸೋಂಕಿತರ ಹೆಸರು ಬಹಿರಂಗಪಡಿಸಿರುವ ಫೇಸ್‌ಬುಕ್‌ ಪೇಜ್ ‘ಮಾರ್ವಲಸ್‌ ಬೆಳಗಾಮ್‌’ ವಿರುದ್ಧ ಇಲ್ಲಿನ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಏಪ್ರಿಲ್‌ 30ರಂದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ ಇಬ್ಬರು ಕೋವಿಡ್-19 ಸೋಂಕಿತ ಮಹಿಳೆಯರ (ಪಿ-149, ಪಿ-147) ಹೆಸರುಗಳನ್ನು ಈ ಫೇಸ್‌ಬುಕ್‌ ಪೇಜ್‌ನಲ್ಲಿಬಹಿರಂಗಪಡಿಸಲಾಗಿತ್ತು.

ಕರ್ನಾಟಕ ಎಪಿಡೆಮಿಕ್‌ ಡಿಸೀಸಸ್‌ ಕೋವಿಡ್‌–19 ರೆಗ್ಯುಲೇಷನ್ಸ್‌ 2020 ಪ್ರಕಾರ, ಸೋಂಕಿತರ ಹೆಸರುಗಳನ್ನು ಬಹಿರಂಗಪಡಿಸುವಂತಿಲ್ಲ. ಈ ನಿಯಮಾವಳಿಯನ್ನು ಉಲ್ಲಂಘಿಸಿ, ಹೆಸರುಗಳನ್ನು ಪ್ರಕಟಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.