ADVERTISEMENT

ಸಂಕೇಶ್ವರ | ದುರ್ಗಾ ಮೆರವಣಿಗೆ ವೇಳೆ ಕಲ್ಲು ತೂರಾಟ: 7 ಮಂದಿಗೆ ಗಾಯ

ಸೋಲಾಪುರ ಗ್ರಾಮದಲ್ಲಿ ಗಲಭೆ ಎಬ್ಬಿಸಿದ ಅನ್ಯ ಕೋಮಿನ ಯುವಕರ ಗುಂಪು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 22:10 IST
Last Updated 14 ಅಕ್ಟೋಬರ್ 2024, 22:10 IST
ಹುಕ್ಕೇರಿ ತಾಲ್ಲೂಕಿನ ಸೋಲಾಪುರದಲ್ಲಿ ಕೋಮು ಘರ್ಷಣೆ ಸಂಭವಿಸಿದ ಹಿನ್ನೆಲೆಯಲ್ಲಿ ಶಾಸಕ ನಿಖಿಲ್‌ ಕತ್ತಿ ಸೋಮವಾರ ಜನರಿಂದ ಸಮಸ್ಯೆ ಆಲಿಸಿದರು
ಹುಕ್ಕೇರಿ ತಾಲ್ಲೂಕಿನ ಸೋಲಾಪುರದಲ್ಲಿ ಕೋಮು ಘರ್ಷಣೆ ಸಂಭವಿಸಿದ ಹಿನ್ನೆಲೆಯಲ್ಲಿ ಶಾಸಕ ನಿಖಿಲ್‌ ಕತ್ತಿ ಸೋಮವಾರ ಜನರಿಂದ ಸಮಸ್ಯೆ ಆಲಿಸಿದರು   

ಸಂಕೇಶ್ವರ : ಸೋಲಾಪುರ ಗ್ರಾಮದಲ್ಲಿ ಭಾನುವಾರ ರಾತ್ರಿ ದುರ್ಗಾಮಾತೆ ಮೂರ್ತಿ ವಿಸರ್ಜನೆ ಮಾಡಿ ಮರಳುವಾಗ, ಅನ್ಯ ಕೋಮಿನ ಯುವಕರು ನಡೆಸಿದ ಕಲ್ಲು ತೂರಾಟದಿಂದ ಏಳು ಭಕ್ತರಿಗೆ ತೀವ್ರ ಪೆಟ್ಟಾಗಿದೆ. ಒಂದು ಕಾರು ಮತ್ತು ನಾಲ್ಕು ಬೈಕು ಜಖಂಗೊಂಡಿವೆ.

ನವರಾತ್ರಿ ಪ್ರಯುಕ್ತ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ದುರ್ಗಾಮಾತೆ ಮೂರ್ತಿಯನ್ನು ಮೆರವಣಿಗೆ ಮೂಲಕ ಹೋಗಿ ವಿಸರ್ಜನೆ ಮಾಡಿ, ಮರಳುವಾಗ ತಡರಾತ್ರಿಯಾಗಿತ್ತು. ಆಗ ಅನ್ಯಕೋಮಿನ ಯುವಕರ ಗುಂ‍ಪು ಏಕಾಏಕಿ ಕಲ್ಲು ತೂರಾಟ ನಡೆಸಿತು. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಯಿತು.

ವಿಷಯ ತಿಳಿದು ರಾತ್ರಿಯೇ ಗ್ರಾಮಕ್ಕೆ ಬಂದ ಪೊಲೀಸರು, ಘಟನೆ ಕುರಿತು ಮಾಹಿತಿ ಪಡೆದರು. ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಸೋಮವಾರ ಸಭೆ ನಡೆಸಿದ ಶಾಸಕ ನಿಖಿಲ್‌ ಕತ್ತಿ, ಜನರಿಗೆ ಧೈರ್ಯ ಹೇಳಿದರು.

ADVERTISEMENT

‘ಶಾಂತಿಯಿಂದ ಇದ್ದ ಊರಿನಲ್ಲಿ ಕೋಮು ಸಂಘರ್ಷ ಉಂಟಾಗಿದ್ದು ದುಃಖ ತಂದಿದೆ. ಪೊಲೀಸರು ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರುತಿ, ಡಿವೈಎಸ್‌ಪಿ ಡಿ.ಎಚ್.ಮುಲ್ಲಾ, ಸಿಪಿಐ ಶಿವಶರಣ ಅವಜಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.