ಬೆಳಗಾವಿ: ದೇವಸ್ಥಾನ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಸಮೀಪದ ಗೌಂಡವಾಡ ಗ್ರಾಮದಲ್ಲಿ ಭಾನುವಾರ ಕೂಡ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಬಂಧನದ ಭೀತಿಯಿಂದ ಹಲವು ಪುರುಷರು ನಸುಕಿನಲ್ಲಿಯೇ ಗ್ರಾಮ ತೊರೆದಿದ್ದಾರೆ.
ಸುರೇಶ ಪಾಟೀಲ ಎನ್ನುವವರ ಕೊಲೆಯಿಂದಾಗಿ, ಶನಿವಾರ ತಡರಾತ್ರಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಬಣವಿಗಳಗಿ ಹಚ್ಚಿದ ಬೆಂಕಿ ಭಾನುವಾರ ಬೆಳಿಗ್ಗೆ ಕೂಡ ಹೊಗೆಯಾಡುತ್ತಿತ್ತು. 40ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾದರು. ಮೂರು ಅಗ್ನಿಶಾಮಕ ವಾಹನಗಳಲ್ಲಿ ನೀರು ತುಂಬಿತಂದು ಬೆಂಕಿಗೆ ಹಾಕಲಾಯಿತು.
ಕುಡಿಯುವ ನೀರು ತುಂಬುವ ಮಹಿಳೆಯರು, ಆಟವಾಡುವ ಮಕ್ಕಳು ಮಾತ್ರ ಅಲ್ಲಲ್ಲಿ ಕಂಡುಬಂದರು.
ವಿವಾದಕ್ಕೆ ಕಾರಣವಾದ ಪ್ರದೇಶದ ಸುತ್ತ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.
'200ಕ್ಕೂ ಹೆಚ್ಚು ಪೊಲೀಸರು ಹಗಲು- ರಾತ್ರಿ ಬಂದೋಬಸ್ತಿನಲ್ಲಿ ನಿರತರಾಗಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆತಂಕ ಪಡುವ ಅವಶ್ಯಕತೆ ಇಲ್ಲ. ಗಲಭೆ ನಿಂತಿದ್ದರಿಂದ ನಿಷೇಧಾಜ್ಞೆ ಹೇರಿಲ್ಲ' ಎಂದು ಎಸಿಪಿ ಎನ್.ವಿ.ಭರಮನಿ 'ಪ್ರಜಾವಾಣಿ' ತಿಳಿಸಿದರು.
ಇವನ್ನೂ ಓದಿ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.