ADVERTISEMENT

ಅಧಿಕಾರದಿಂದ ತೆರವು: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 15:37 IST
Last Updated 5 ನವೆಂಬರ್ 2024, 15:37 IST

ಬೆಳಗಾವಿ: ‘ಅವಧಿಗೂ ಮುನ್ನವೇ ತಮ್ಮನ್ನು ಕರ್ತವ್ಯದಿಂದ ತೆರವು ಮಾಡಲಾಗಿದೆ’ ಎಂದು ಆರೋಪಿಸಿ, ಪ್ರಾಧ್ಯಾಪಕ ಒಬ್ಬರು ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಇತರ ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.

ಆರ್‌ಸಿಯು ಬಿಸಿನೆಸ್‌ ಅಡ್ಮಿನಿಸ್ಟ್ರೇಷನ್‌ ವಿಭಾಗದ ಪ್ರಾಧ್ಯಾಪಕ ಎನ್‌.ಮಾರುತಿರಾವ್ ದೂರು ದಾಖಲಿಸಿದವರು. ಕುಲಪತಿ ಸಿ.ಎಂ. ತ್ಯಾಗರಾಜ, ಸಂತೋಷ ಕಾಮಗೌಡ, ಪ್ರೊ.ಉತ್ತಮ್‌ ಕಿಣಗೆ ಅವರ ವಿರುದ್ಧ ಆರೋಪ ಮಾಡಿದ್ದಾರೆ.

‘2018ರಲ್ಲಿ ಪ್ರಶ್ನೆ ಪತ್ರಿಕೆ ಲೋಪದಿಂದ ಕೂಡಿದೆ ಎಂಬ ಕಾರಣಕ್ಕೆ ನನ್ನನ್ನು ಅಮಾನತು ಮಾಡಲಾಗಿತ್ತು. 2024ರ ಜನವರಿ 27ರಂದು ಡಾಕ್ಟರೇಟ್‌ ಸಮಿತಿಯ ಅಧ್ಯಕ್ಷರಾಗಿ, ವ್ಯವಹಾರ ಆಡಳಿತ ಮಂಡಳಿಯ ಸ್ನಾತಕೋತ್ತರ ವಿಭಾಗದ ಅಧ್ಯಯನ ಸಮಿತಿಯ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಇದರ ಅಧಿಕಾರ ಅವಧಿಯು 2024ರ ಜನವರಿ 3ರಿಂದ 2026ರ ಜನವರಿ 2ರವರೆಗೂ ಇದೆ. ಆದರೆ, ಕಾನೂನು ನೆಪದಲ್ಲಿ ಅವಧಿಗೂ ಮುನ್ನವೇ ಅಧಿಕಾರದಿಂದ ತೆರವು ಮಾಡಿ, ಬೇರೊಬ್ಬರಿಗೆ ನೀಡಲಾಗಿದೆ. ತಾನು ಅನುಸೂಚಿತ ಬುಡಕಟ್ಟು ಸಮಾಜದ ವ್ಯಕ್ತಿ ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.