ಬೆಳಗಾವಿ: ರಾಜ್ಯ ಗ್ರಾಹಕರ ವ್ಯಾಜ್ಯ ಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠವನ್ನು, ಬೆಳಗಾವಿಗೂ ಮಂಜೂರು ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಇದರೊಂದಿಗೆ ಕಿತ್ತೂರು ಕರ್ನಾಟಕ ಭಾಗದ ಜನರ ಹೋರಾಟಕ್ಕೆ ಮತ್ತೊಂದು ಜಯ ಸಿಕ್ಕಿದೆ.
ಈ ಪೀಠಕ್ಕಾಗಿ ಬೆಳಗಾವಿ ಜಿಲ್ಲಾ ಗ್ರಾಹಕರ ಸಂಘದ ನೇತೃತ್ವಲ್ಲಿ 2019 ರಿಂದ ಹೋರಾಟ ನಡೆದಿತ್ತು. ಆದರೆ, ಸರ್ಕಾರ ಈಚೆಗೆ ಕಲ್ಯಾಣ ಕರ್ನಾಟಕ ಭಾಗಕ್ಕೆ (ಕಲಬುರಗಿ) ಪೀಠ ಮಂಜೂರು ಮಾಡಿತ್ತು. ಇದರಿಂದ ರೋಸಿಹೋದ ವಕೀಲರು 4 ದಿನ ಗಳಿಂದ ಧರಣಿ ಆರಂಭಿಸಿದ್ದರು. ಕೋರ್ಟ್ ಕಲಾಪಗಳಿಂದ ಹೊರಗು ಳಿದ ವಕೀಲರ ಒತ್ತಡಕ್ಕೆ ಮಣಿದ ಸರ್ಕಾರ ಸ್ಪಂದಿಸಿದೆ.
ರಾಜ್ಯ ಗ್ರಾಹಕರ ವ್ಯಾಜ್ಯಗಳನ್ಯಾಯಾಲಯದಲ್ಲಿ ಕಿತ್ತೂರು ಕರ್ನಾ ಟಕ ಭಾಗದ 6,000ಕ್ಕೂ ಹೆಚ್ಚು ಪ್ರಕರಣ ಬಾಕಿ ಇವೆ. ಹೀಗಾಗಿ, ಪ್ರತಿ ಬಾರಿಯೂ ನ್ಯಾಯಕ್ಕಾಗಿ ಗ್ರಾಹಕರು ಬೆಂಗಳೂರಿಗೆ ಅಲೆದಾಡುವಂತಾಗಿದೆ. ಜಿಲ್ಲಾ ಗ್ರಾಹಕರ ವೇದಿಕೆಯಲ್ಲೂ 5,700 ಪ್ರಕರಣ ಬಾಕಿ ಇವೆ. ಇವು ಗಳ ತುರ್ತು ವಿಲೇವಾರಿಗಾಗಿ ಪ್ರತ್ಯೇಕ ಸಂಚಾರಿ ಪೀಠ ಅಗತ್ಯ ಎಂದು ಹೋರಾಟ ಆರಂಭಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.