ಬೆಳಗಾವಿ: 'ಬಸಪ್ಪ ಇವತ್ತೇ ಮೊದಲ ದಿನ ಕೆಲಸಕ್ಕೆ ಹೋಗಿದ್ದರಿ. ಉಂಡು ಮನ್ಯಾಗ ಇರು ಮಗನ ಅಂತ ಅವರವ್ವ ಹೇಳಿದ್ಲು. ದುಡಿದು ಉಣ್ಣಾಕ ಹೊಂಟ ಹುಡಗನ್ನ ದೇವರು ಕರಕೊಂಡ ಬಿಟ್ಟ...'
ತಾಲ್ಲೂಕಿನ ಕಳ್ಯಾಳ್ ಗ್ರಾಮದ ಬಳಿ ಭಾನುವಾರ ಕ್ರೂಸರ್ ಪಲ್ಟಿಯಾಗಿ ಮೃತಪಟ್ಟವರಲ್ಲಿ, ಬಸವರಾಜ ಎನ್ನುವ ಯುವಕ ಮೊದಲ ದಿನ ಈ ವಾಹನದಲ್ಲಿ ಕೆಲಸಕ್ಕೆ ತೆರಳಿದ್ದರು.
'ಊರಿನಲ್ಲಿ ಖಾಲಿ ಇದ್ದು ಏನ್ ಮಾಡ್ತಿ. ಕೆಲಸಕ್ಕೆ ನಡಿ...'ಎಂದು ಓರಿಗೆಯವರು ಬಸವರಾಜ ಅವರನ್ನು ವಾಹನ ಹತ್ತಿಸಿದ್ದರು.
ಬಸವರಾಜ ಅವರ ತಾಯಿ ಕೆಲಸಕ್ಕೆ ಹೋಗುವುದು ಬೇಡ ಎಂದು ಮಗನನ್ನು ತಡೆದರೂ ಗೆಳೆಯರ ಒತ್ತಾಯಕ್ಕೆ ಮಣಿದು ದುಡಿಮೆಗೆ ಹೊರಟಿದ್ದರು.
ಅಪಘಾತದಿಂದ ತೀವ್ರ ಗಾಯಗೊಂಡ ಬಸವರಾಜ ಅವರ ನರಳಾಟ ಕಂಡವರಿಗೆ ಕರುಳು ಕಿತ್ತುಬಂದಂತಾಯಿತು. ಕೆಲವೇ ಕ್ಷಣಗಳಲ್ಲಿ ಕೂಗಾಟ ನಿಲ್ಲಿಸಿದ ಬಸವರಾಜ ಪ್ರಾಣಪಕ್ಷಿ ಹಾರಿತು. ಅವರನ್ನು ಕಂಡು ಗ್ರಾಮದವರ ದುಃಖ ಮಡುಗಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.