ADVERTISEMENT

ಕರಾಳ ದಿನಕ್ಕೆ ಅವಕಾಶ ಇಲ್ಲ: ರಾಜೇಶ ಬುರ್ಲಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 15:25 IST
Last Updated 25 ಅಕ್ಟೋಬರ್ 2024, 15:25 IST
ಮಂಗಸೂಳಿ ಗ್ರಾಮದಲ್ಲಿ ನಡೆದ ರಾಜ್ಯೋತ್ಸವ ಶಾಂತಿ ಪಾಲನ ಸಭೆಯಲ್ಲಿ ತಹಶೀಲ್ದಾರ ರಾಜೇಶ ಬುರ್ಲಿ ಮಾತನಾಡಿದರು ಪಿಎಸ್‌ಐ ಜಿ.ಜಿ. ಬಿರಾದರ ಇದ್ದರು.
ಮಂಗಸೂಳಿ ಗ್ರಾಮದಲ್ಲಿ ನಡೆದ ರಾಜ್ಯೋತ್ಸವ ಶಾಂತಿ ಪಾಲನ ಸಭೆಯಲ್ಲಿ ತಹಶೀಲ್ದಾರ ರಾಜೇಶ ಬುರ್ಲಿ ಮಾತನಾಡಿದರು ಪಿಎಸ್‌ಐ ಜಿ.ಜಿ. ಬಿರಾದರ ಇದ್ದರು.   

ಕಾಗವಾಡ: ಪ್ರತಿಯೊಬ್ಬರು ಮಾತೃಭಾಷಾಭಿಮಾನ ಹೊಂದಿರಬೇಕು. ಆದರೆ ಇತರ ಭಾಷೆಗಳನ್ನು ದ್ವೇಷಿಸಬಾರದು. ಎಲ್ಲರೂ ಸೇರಿ ಕರ್ನಾಟಕ ರಾಜೋತ್ಸವವನ್ನು ಅದ್ದೂರಿಯಾಗಿ ಆಚರಿಸೋಣ. ಕರಾಳ ದಿನಕ್ಕೆ ಅವಕಾಶ ಇಲ್ಲ‌ ಎಂದು ತಹಶೀಲ್ದಾರ್‌ ರಾಜೇಶ ಬುರ್ಲಿ ಹೇಳಿದರು.

ಶುಕ್ರವಾರ ತಾಲ್ಲೂಕಿನ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮಂಗಸೂಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸುವ ಕುರಿತು ನಡೆದ ಶಾಂತಿ ಪಾಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮರಾಠಿ ಭಾಷಿಕರೇ ಹೆಚ್ಚಾಗಿರುವ ಮಂಗಸೂಳಿ ಗ್ರಾಮದಲ್ಲಿ ಕಳೆದ ಅನೇಕ ವರ್ಷಗಳಿಂದ ನ.1 ರಂದು ಕರಾಳ ದಿನ ಆಚರಿಸುತ್ತಾ ಬರಲಾಗುತ್ತಿತ್ತು. ನಾನು ಇಲ್ಲಿಗೆ ಬಂದ ಮೇಲೆ ಇಲ್ಲಿಯ ಜನರನ್ನು ವಿಸ್ವಾಸಕ್ಕೆ ತೆಗೆದುಕೊಂಡು ಸತತ ನಾಲ್ಕು ವರ್ಷಗಳಿಂದ ಶಾಂತಿಯುತವಾಗಿ ರಾಜ್ಯೋತ್ಸವವನ್ನು ಆಚರಿಸುತ್ತ ಬಂದಿದ್ದೇವೆ. ಅದರಂತೆ ಈ ವರ್ಷವೂ ಕೂಡ ಅದ್ದೂರಿಯಾಗಿ ರಾಜ್ಯೋತ್ಸವ ಆಚರಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ADVERTISEMENT

ಪಿಎಸ್‌ಐ ಜಿ.ಜಿ. ಬಿರಾದರ ಮಾತನಾಡಿ, ಕರ್ನಾಟಕ ರಾಜ್ಯೋತ್ಸವ ಆಚರಣೆ ವೇಳೆ ಸರ್ಕಾರದ ನಿಯಮಾವಳಿಗಳ ಉಲ್ಲಘಂನೆ ಮಾಡಿದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ವೇಳೆ ಮುಖಂಡ ಸಂಜಯ ತಳವಳಕರ ಸೇರಿದಂತೆ ಅನೇಕರು ಮಾತನಾಡಿದರು.

ಈ ಸಮಯದಲ್ಲಿ ಗ್ರಾ.ಪಂ.ಅಧ್ಯಕ್ಷ ಬಾಳು ಭಜಂತ್ರಿ, ಜಯಸಿಂಗ ಪಾಟೀಲ, ಪಿಡಿಒ ಸಂಜೀವ ಸೂರ್ಯವಂಶಿ, ಗ್ರಾಮ ಲೆಕ್ಕಾಧಿಕಾರಿ ಪರಾಗ ಕಾಂಬಳೆ, ಕರವೇ ಅಧ್ಯಕ್ಷ ದತ್ತಾತ್ರೇಯ ಪೂಜಾರಿ, ಮುಕುಂದ ಪೂಜಾರಿ, ಪ್ರಮೋದ ಪೂಜಾರಿ, ಬಾಬಾಸಾಹೇಬ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.