ADVERTISEMENT

ರಾಮದುರ್ಗ | ನವರಾತ್ರಿ ಉತ್ಸವ: ದುರ್ಗಾಮಾತಾ ದೌಡ್‌ ಆರಂಭ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 14:10 IST
Last Updated 3 ಅಕ್ಟೋಬರ್ 2024, 14:10 IST
ರಾಮದುರ್ಗದಲ್ಲಿ ನವರಾತ್ರಿ ಅಂಗವಾಗಿ ಗುರುವಾರ ದುರ್ಗಾಮಾತಾ ದೌಡ್‌ ನಡೆಯಿತು
ರಾಮದುರ್ಗದಲ್ಲಿ ನವರಾತ್ರಿ ಅಂಗವಾಗಿ ಗುರುವಾರ ದುರ್ಗಾಮಾತಾ ದೌಡ್‌ ನಡೆಯಿತು   

ರಾಮದುರ್ಗ: ನವರಾತ್ರಿ ಉತ್ಸವದ ನಿಮಿತ್ತ ಗುರುವಾರ ತಾಲ್ಲೂಕಿನ ಸುನ್ನಾಳದ ಮಾರುತೇಶ್ವರ ದೇವಸ್ಥಾನದಿಂದ ‘ದುರ್ಗಾಮಾತಾ ದೌಡ್‌’ ಮೆರವಣಿಗೆ ಅದ್ದೂರಿಯಾಗಿ ಆರಂಭಗೊಂಡಿತು.

ಸುನ್ನಾಳ ಗ್ರಾಮದ ಮಾರುತಿ ದೇವಸ್ಥಾನದಿಂದ ಬೆಳಿಗ್ಗೆ 6ಕ್ಕೆ ಆರಂಭಗೊಂಡ ದುರ್ಗಾಮಾತಾ ದೌಡ್‌ ಯಾತ್ರೆಗೆ ಬಿಜೆಪಿ ಮಂಡಲ ಅಧ್ಯಕ್ಷ ಡಾ. ಕೆ.ವಿ. ಪಾಟೀಲ, ಪಿ.ಎಫ್‌. ಪಾಟೀಲ ಪ್ರೇರಣಾ ಮಂತ್ರ ಹೇಳುವ ಮೂಲಕ ಚಾಲನೆ ನೀಡಿದರು.

‘ಸ್ವಾತಂತ್ರ್ಯವೀರ ಸಾವರಕರ ಪ್ರತಿಷ್ಠಾನ, ಸಾರ್ವಜನಿಕ ಉತ್ಸವ ಕಮಿಟಿ ಆಶ್ರಯದಲ್ಲಿ ಸುನ್ನಾಳ ಗ್ರಾಮದಿಂದ ಆರಂಭಗೊಂಡ ಯಾತ್ರೆಯು ತಾಲ್ಲೂಕಿನ ಕಂಕಣವಾಡಿ, ತೂರನೂರ ಮಾರ್ಗವಾಗಿ ಪಟ್ಟಣದ ಅಂಬಾ ಭವಾನಿ ದೇವಸ್ಥಾನಕ್ಕೆ ಬಂದು ಸಂಪನ್ನಗೊಂಡಿತು. ಅ. 11ರವರೆಗೆ ಪ್ರತಿದಿನ ಬೆಳಿಗ್ಗೆ 6ಕ್ಕೆ ದುರ್ಗಾಮಾತಾ ದೌಡ್‌ ಜರುಗಲಿದೆ ಎಂದು ಸಂಘಟಕರು ತಿಳಿಸಿದರು.

ADVERTISEMENT

ಧನಲಕ್ಷ್ಮೀ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಗಂಗಾಧರ ಭೋಸಲೆ, ಧನಂಜಯ ವಾಸ್ಟರ್‌, ಸಮೀರ ಆಪ್ಟೆ ಇದ್ದರು.

ಶುಕ್ರವಾರ ಬೆಳಿಗ್ಗೆ ಪಟ್ಟಣದ ಮಡ್ಡಿ ಗಲ್ಲಿಯ ಮಲ್ಲಮ್ಮನ ದೇವಸ್ಥಾನದಿಂದ ದುರ್ಗಾಮಾತಾ ದೌಡ್‌ ಆರಂಭಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.