ADVERTISEMENT

ಕತ್ತಿ ನಿಧನ ಹಿನ್ನೆಲೆ: ಹಿರೇಮಠದಲ್ಲಿ ಸರಳ ದಸರಾ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 13:48 IST
Last Updated 3 ಅಕ್ಟೋಬರ್ 2022, 13:48 IST
ಹುಕ್ಕೇರಿ ದಸರಾ ಉತ್ಸವದಲ್ಲಿ ಪಾಲ್ಗೊಂಡ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಅವರನ್ನು ಮಠಾಧ್ಯಕ್ಷ ಚಂದ್ರಶೇಖರ್ ಸ್ವಾಮೀಜಿ ಸೋಮವಾರ ಸತ್ಕರಿಸಿದರು
ಹುಕ್ಕೇರಿ ದಸರಾ ಉತ್ಸವದಲ್ಲಿ ಪಾಲ್ಗೊಂಡ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಅವರನ್ನು ಮಠಾಧ್ಯಕ್ಷ ಚಂದ್ರಶೇಖರ್ ಸ್ವಾಮೀಜಿ ಸೋಮವಾರ ಸತ್ಕರಿಸಿದರು   

ಹುಕ್ಕೇರಿ: ಪ್ರತಿ ವರ್ಷ ಹಿರೇಮಠದ ದಸರಾ ಉತ್ಸವ ಅದ್ಧೂರಿಯಾಗಿ ನಡೆಯುತ್ತಿತ್ತು. ಆದರೆ ಕ್ಷೇತ್ರದ ಶಾಸಕ, ಸಹೋದರ ಉಮೇಶ ಕತ್ತಿ ಅವರ ನಿಧನದಿಂದ ಸರಳ ದಸರಾ ಆಚರಿಸಿ ಕತ್ತಿ ಮನೆತನದ ಜತೆ ಹಿರೇಮಠ ಯಾವಾಗಲೂ ಇದೆ ಎಂದು ಧೈರ್ಯ ತುಂಬಿದ್ದಕ್ಕೆ ನಾನು ಮಠಕ್ಕೆ ಮತ್ತು ಚಂದ್ರಶೇಖರ ಸ್ವಾಮೀಜಿಗೆ ಚಿರಋಣಿ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ಅವರು ಮಠದ ದಸರಾ ಉತ್ಸವದಲ್ಲಿ ಪಾಲ್ಗೊಂಡು, ಗುರುಕುಲ ವಿದ್ಯಾರ್ಥಿ ಪರಿಷತ್ತಿನ 3ನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಮಠಾಧ್ಯಕ್ಷ ಚಂದ್ರಶೇಖರ್ ಸ್ವಾಮೀಜಿ, ಕತ್ತಿ ಮನೆತನದ ಸಾಮಾಜಿಕ ಹೊಣೆಗಾರಿಕೆ ಮತ್ತು ಜನಪರ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕತ್ತಿ ಅವರ ಮನೆತನ ಸದಾ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಲಿ ಎಂದು ಹಾರೈಸಿದರು.

ADVERTISEMENT

ಬೆಂಗಳೂರಿನ ಶಿವಗಂಗಾ ಕ್ಷೇತ್ರದ ಡಾ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಶಂಕರ ದೇವರು ಮಾತನಾಡಿದರು.

ವಿದ್ವಾನ್ ಸಂಪತ್ ಕುಮಾರ ಶಾಸ್ತ್ರಿ ಮತ್ತು ವೇದಮೂರ್ತಿ ಚಂದ್ರಶೇಖರ ಶಾಸ್ತ್ರಿಗಳು ಪೂಜೆ ನೆರವೇರಿಸಿದರು.

ಪುರಸಭೆ ಅಧ್ಯಕ್ಷ ಅಣ್ಣಾಗೌಡ ಪಾಟೀಲ, ಉಪಾಧ್ಯಕ್ಷ ಆನಂದ ಗಂಧ, ಸದಸ್ಯರಾದ ರಾಜು ಮುನ್ನೋಳಿ, ಭೀಮಶಿ ಗೋರಖನಾಥ, ಮಹಾವಿರ ಉದ್ಯೋಗ ಸಮೂಹ ಸಂಸ್ಥೆಗಳ ಅಧ್ಯಕ್ಷ ಮಹಾವಿರ ನಿಲಜಗಿ, ಎಸ್.ಕೆ.ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಪಿಂಟು ಶೆಟ್ಟಿ, ಹಿರಾ ಶುಗರ್ಸ್ ನಿರ್ದೇಶಕರಾದ ಅಶೋಕ ಪಟ್ಟಣಶೆಟ್ಟಿ, ರಾಜು ಕಲ್ಲಟ್ಟಿ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಪರಗೌಡ ಪಾಟೀಲ, ಮುಖಂಡರಾದ ಗುರು ಕುಲಕರ್ಣಿ, ಚನ್ನಪ್ಪ ಗಜಬರ, ನಿಶಾಂತ್ ಸ್ವಾಮಿ, ಪ್ರಸಾದ ಹಿರೇಮಠ, ಉದಯ ಕೋರಿಮಠ, ಮಠದ ಸದ್ಭಕ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.